ದೇಶ

ವಿಶ್ವಸಂಸ್ಥೆ: ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸ್ಥಾನ ಕನಸಿಗೆ ಚೀನಾ-ರಷ್ಯಾ ಅಡ್ಡಿ..?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯಲು ಭಾರತ ಶತ ಪ್ರಯತ್ನ ನಡೆಸುತ್ತಿದ್ದರೆ, ಅತ್ತ ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಭಾರತದ ಕನಸನ್ನು ಭಗ್ನಗೊಳಿಸಲು ಮುಂದಾಗಿವೆ.

ವಿಶ್ವಸಂಸ್ಥೆ: ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸ್ಥಾನ ಕನಸಿಗೆ ಚೀನಾ-ರಷ್ಯಾ ಅಡ್ಡಿ..?
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ (ಸಂಗ್ರಹ ಚಿತ್ರ)
Published On :

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯಲು ಭಾರತ ಶತ ಪ್ರಯತ್ನ ನಡೆಸುತ್ತಿದ್ದರೆ, ಅತ್ತ ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಭಾರತದ ಕನಸನ್ನು  ಭಗ್ನಗೊಳಿಸಲು ಮುಂದಾಗಿದೆ.

ವಿಶೇಷವೆಂದರೆ ಈ ಹಿಂದೆ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ಕಲ್ಪಿಸುವಲ್ಲಿ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದ, ಚೀನಾ-ರಷ್ಯಾ ರಾಷ್ಟ್ರಗಳೇ ಇದೀಗ ಭಾರತದ ಬೆನ್ನಿಗೆ ಇರಿಯಲು  ಮುಂದಾಗಿದೆ. ರಷ್ಯಾ ಮತ್ತು ಚೀನಾ ರಾಯಭಾರಿಗಳು ಪರಸ್ಪರ ಒಪ್ಪಂದ ಮಾಡಿಕೊಂಡಿಕೊಂಡು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ದೊರೆಯದಂತೆ  ತಡೆಯಲು ಯತ್ನಿಸುತ್ತಿವೆ ಎಂದು ಖಾಸಗಿ ಪತ್ರಿಕೆ ವರದಿ ಮಾಡಿದೆ.

ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಪಟ್ಟಿಯ ಪುನಾರಚನೆಗೆ ಸಂಬಂಧಿಸಿದ ಕರಡು ಪಠ್ಯದಲ್ಲಿ ರಷ್ಯಾ ಮತ್ತು ಚೀನಿ ರಾಯಭಾರಿಗಳು ಭಾರತಕ್ಕೆ ವ್ಯತಿರಿಕ್ತ ವಾಗಬಲ್ಲ ಅಂಶಗಳನ್ನು  ಸೇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಭದ್ರತಾ ಮಂಡಳಿ ಪುನಾರಚನೆಗೆ ಆಧಾರವಾಗಿರುವ ಪಠ್ಯಕ್ಕೆ ತಮ್ಮ ಪ್ರಸ್ತಾವನೆ ಸೇರಿಸಲು ನಿರಾಕರಿಸುವ ಮೂಲಕ ಭಾರತದ ಕನಸನ್ನು  ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಭಗ್ನಗೊಳಿಸಿದ್ದವು. ಭಾರತದ ಸತತ ಪ್ರಯತ್ನಗಳ ಫಲವಾಗಿ ಪಠ್ಯಕ್ಕೆ ತಮ್ಮ ಪ್ರಸ್ತಾವನೆ ಸೇರಿಸಲು ವಿವಿಧ ದೇಶಗಳು ಒಪ್ಪಿದ್ದವು. ಈ ದೇಶಗಳ  ಪಟ್ಟಿಯಲ್ಲಿ ರಷ್ಯಾ ಮತ್ತು ಚೀನಾ ಕೂಡ ಇತ್ತು.

ಆದರೆ ಇದೀಗ ಚೀನಾ ಮತ್ತು ರಷ್ಯಾ ರಾಯಭಾರಿಗಳು ಪರಸ್ಪರ ಕೈ ಜೋಡಿಸಿ ಪಠ್ಯಕ್ಕೆ ಸಲ್ಲಿಸುವ ತಮ್ಮ ಪ್ರಸ್ತಾವನೆಯಲ್ಲಿ ಕೆಲ ವಾಕ್ಯಗಳನ್ನು ಸೇರಿಸುವ ಮೂಲಕ ಭದ್ರತಾ ಮಂಡಳಿ  ಪುನಾರಚನೆ ಪ್ರಕ್ರಿಯೆಯನ್ನೇ ವರ್ಷಗಟ್ಟಲೆ ಮುಂದೂಡಲು ಪ್ರಯತ್ನಿಸಿವೆ ಎಂದು ಹೇಳಲಾಗುತ್ತಿದೆ. ಚೀನಾ ಮತ್ತು ರಷ್ಯಾ ದೇಶಗಳ ಈ ಜಂಟಿ ಕಾರ್ಯಾಚರಣೆಯಿಂದಾಗಿ ವಿಶ್ವಸಂಸ್ಥೆಯಲ್ಲಿ  ಖಾಯಂ ಸದಸ್ಯ ಸ್ಥಾನ ಪಡೆಯುವ ಭಾರತದ ಕನಸು ಮತ್ತಷ್ಟು ವರ್ಷಗಳ ಕಾಲ ಮುಂದೂಡಲ್ಪಡುತ್ತದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಈ ವಿಚಾರ ತಿಳಿದ ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿಗಳು ಪ್ರತಿಭಟನೆಗೆ ಮುಂದಾಗಿದ್ದು, ಕರಡು ಪಠ್ಯದಲ್ಲಿ ರಷ್ಯಾ-ಚೀನಿ ರಾಯಭಾರಿಗಳು ಸೇರಿಸಿರುವ ವಿವಾದಾತ್ಮಕ ವಾಕ್ಯಗಳನ್ನು  ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಯುಎನ್ ಜಿಎ ಅಧ್ಯಕ್ಷ ಸ್ಯಾಮ್ ಕುಟೇಸಾ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.