ಕಾಶ್ಮೀರಿ ಯುವಕರಿಗೆ ಯುಪಿಎ ಪ್ರಾರಂಭಿಸಿದ್ದ ಉದ್ಯೋಗ ಯೋಜನೆ ಮುಂದುವರೆಸಲು ಕಾಂಗ್ರೆಸ್ ಒತ್ತಾಯ
ಯುಪಿಎ ಸರ್ಕಾರ ಕಾಶ್ಮೀರಿ ಯುವಕರಿಗಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭಿಸಿದ್ದ ಉದ್ಯೋಗದ ಯೋಜನೆಗಳನ್ನು ಎನ್.ಡಿ.ಎ ಸರ್ಕಾರ ಮುಂದುವರೆಸಬೇಕು...

ಶ್ರೀನಗರ: ಯುಪಿಎ ಸರ್ಕಾರ ಕಾಶ್ಮೀರಿ ಯುವಕರಿಗಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭಿಸಿದ್ದ ಉದ್ಯೋಗ ಯೋಜನೆಗಳನ್ನು ಎನ್.ಡಿ.ಎ ಸರ್ಕಾರ ಮುಂದುವರೆಸಬೇಕೆಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಒತ್ತಾಯಿಸಿದ್ದಾರೆ.
ನೇಮಕಾತಿ ಆದೇಶ ಹಾಗೂ ಕ್ರಮಬದ್ಧಗೊಳಿಸುವಿಕೆಗೆ ಆಗ್ರಹಿಸಿ ಕಳೆದ 17 ದಿನಗಳಿಂದ ರಾಷ್ಟ್ರೀಯ ಯುವ ಕಾರ್ಪ್ಸ್ ನ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಗುಲಾಂ ನಬಿ ಆಜಾದ್ ಬೆಂಬಲ ಸೂಚಿಸಿ, ಈ ಹಿಂದಿನ ಯುಪಿಎ ಸರ್ಕಾರ ಪ್ರಾರಂಭಿಸಿದ್ದ ಉದ್ಯೋಗ ಯೋಜನೆಗಳನ್ನು ಎನ್.ಡಿ.ಎ ಸರ್ಕಾರವೂ ಮುಂದುವರೆಸಬೇಕು ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 6 ಕ್ಕಿಂತ ಹೆಚ್ಚು ಉದ್ಯೋಗ ಯೋಜನೆಗಳನ್ನು ಘೋಷಿಸಿದ್ದೆವು, ಯುವಕರೂ ಕಾಶ್ಮೀರದ ಅಭಿವೃದ್ಧಿಯಲ್ಲಿ ಭಾಗಿಯಾಗಲು ಸಹಕಾರಿಯಾಗಿತ್ತು ಎಂದು ಆಜಾದ್ ಹೇಳಿದ್ದಾರೆ. ಕೇಂದ್ರ ಸರ್ಕಾರ, ಪ್ರತಿಭಟನ ನಿರತ ಯುವಕರಿಗೆ ಅವರ ವಿದ್ಯಾರ್ಹತೆ ಅನುಸಾರವಾಗಿ ಸರ್ಕಾರಿ ಇಲಾಖೆಗಳಲ್ಲಿ ತಕ್ಷಣವೇ ಉದ್ಯೋಗ ನೀಡಬೇಕು ಎಂದು ಹೇಳಿದ್ದಾರೆ.
ಎನ್.ವೈ.ಸಿ ಅಭ್ಯರ್ಥಿಗಳ ಪ್ರತಿಭಟನೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ಮಾಡುವುದಾಗಿ ಗುಲಾಂ ನಬಿ ಆಜಾದ್ ಅಭ್ಯರ್ಥಿಗಳಿಗೆ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


