ಕೊಲ್ಲುವ ಗಂಡನನ್ನು ಯಾರಾದರೂ ಸ್ವೀಟ್ ಹಾರ್ಟ್ ಎಂದು ಕರೆಯುತ್ತಾರಾ? ಸೋಮನಾಥ್ ಭಾರ್ತಿ
ಕೌಟಂಬಿಕ ದೌರ್ಜನ್ಯ ಪ್ರಕರಣ ಕುರಿತಂತೆ ತಮ್ಮ ಪತ್ನಿ ಲಿಪಿಕಾ ಮಿತ್ರಾ ದಾಖಲಿಸಿದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ದೆಹಲಿಯ ಮಾಜಿ ಕಾನೂನು ಸಚಿವ ...

ನವದೆಹಲಿ: ಕೌಟಂಬಿಕ ದೌರ್ಜನ್ಯ ಪ್ರಕರಣ ಕುರಿತಂತೆ ತಮ್ಮ ಪತ್ನಿ ಲಿಪಿಕಾ ಮಿತ್ರಾ ದಾಖಲಿಸಿದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಹೇಳಿದ್ದಾರೆ . ಆಕೆ ಸದಾ ನನ್ನನ್ನು ಸ್ವಿಟ್ ಹಾರ್ಟ್ ಎಂದು ಕರೆಯುತ್ತಿದ್ದಳು ಎನ್ನುವುದಕ್ಕೆ ನನ್ನ ಬಳಿ ಆಡಿಯೋ, ವಿಡಿಯೋ ಸಾಕ್ಷಿಯಿದ್ದು ಸತ್ಯವನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.
ಪತಿ ಭಾರ್ತಿ ತಮ್ಮ ಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿಕೆ ನೀಡುವ ಲಿಪಿಕಾ ಮತ್ತೊಂದೆಡೆ ಸ್ವಿಟ್ ಹಾರ್ಟ್ ಮನೆಗೆ ಯಾವಾಗ ಬರುತ್ತೀರಾ? ನಾನು ನಿಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೊಬೈಲ್ ಸಂದೇಶವನ್ನು ಫೆಬ್ರವರಿ 25 ರಂದು ನನಗೆ ಕಳುಹಿಸಿದ್ದಾಳೆ. ಪ್ರತಿನಿತ್ಯ ಹಿಂಸೆ ನೀಡಿ ಕೊಲ್ಲಲು ಯತ್ನಿಸಿದ ಪತಿಗೆ ಯಾವ ಪತ್ನಿ ತಾನೇ ಇಂತಹ ಮೇಸೇಜ್ ಕಳುಹಿಸುತ್ತಾಳೆ ಎಂದು ಪ್ರಶ್ನಿಸಿದ್ದಾರೆ.
ಲಿಪಿಕಾ ಮಿತ್ರಾ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎನ್ನುವುದಕ್ಕೆ ನನ್ನ ಬಳಿ ಹಲವಾರು ಸಾಕ್ಷಿಗಳಿವೆ. ಇದರ ಹಿಂದೆ ಬೇರೆಯವರ ಒತ್ತಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


