ಓಟ್ಸ್ ಪ್ಯಾಕೆಟ್ ನಲ್ಲಿ ಹುಳು, ಹುಪ್ಪಟೆ ಪತ್ತೆ
ಗ್ರಾಹಕರೊಬ್ಬರು ಖರೀದಿಸಿದ ಓಟ್ಸ್ ಪ್ಯಾಕೆಟ್ ನಲ್ಲಿ ಹುಳು-ಹುಪ್ಪಟೆಗಳು ಕಂಡುಬಂದು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ...

ಸೇಲಂ:ಗ್ರಾಹಕರೊಬ್ಬರು ಖರೀದಿಸಿದ ಓಟ್ಸ್ ಪ್ಯಾಕೆಟ್ ನಲ್ಲಿ ಹುಳು-ಹುಪ್ಪಟೆಗಳು ಕಂಡುಬಂದು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿರುವ ಘಟನೆ ಮಂಗಳವಾರ ತಮಿಳುನಾಡಿನ ಸೇಲಂ ನಲ್ಲಿ ನಡೆದಿದೆ.
ಗ್ರಾಹಕರು ನೀಡಿದ ದೂರಿನ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಸುರಕ್ಷತಾ ಪ್ರಾಧಿಕಾರದ ಅಧಿಕಾರಿ ಡಾ. ಅನುರಾಧ ಅವರು, ಓಟ್ಸ್ ನ ಮಾದರಿಯನ್ನು ಮಾಲ್ ವೊಂದರಿಂದ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ.
ಮಾಲ್ ನಿಂದ ಖರೀದಿಸಿದ ಮೂರು ಓಟ್ಸ್ ಪ್ಯಾಕೆಟ್ ಗಳಲ್ಲಿ ಒಂದು ಪ್ಯಾಕೆಟ್ ನ್ನು ತೆರೆದಾಗ ಅದರಲ್ಲಿ ಹುಳು ಹುಪ್ಪಟೆಗಳಿದ್ದವು. ಇದನ್ನು ಮಾಲ್ ನ ಸಿಬ್ಬಂದಿಗಳ ಗಮನಕ್ಕೆ ತಂದಾಗ ಅವರು ತಮಗೆ ಬೈದು ಹಲ್ಲೆ ನಡೆಸಲು ಮುಂದಾದರು ಎಂದು ಗ್ರಾಹಕರು ಆರೋಪಿಸಿದ್ದಾರೆ.
ಓಟ್ಸ್ ಮಾದರಿಯ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪರೀಕ್ಷೆಯಲ್ಲಿ ಕಲಬೆರಕೆ ಪತ್ತೆಯಾದರೆ ಮಾಲ್ ನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದ ನಂತರ ಬೇರೆ ಅಂಗಡಿಗಳಿಂದಲೂ ಓಟ್ಸ್ ಮಾದರಿಯ ಸ್ಯಾಂಪಲ್ ಗಳನ್ನು ಪಡೆದುಕೊಳ್ಳಲಾಗಿದೆ ಎಂದು ಅನುರಾಧ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


