ದೇಶ

ಮೋದಿ ಮಾತಿಗೂ, ವಾಸ್ತವಿಕತೆಗೂ ಭಾರಿ ಅಂತರ ಇದೆ: ಶಶಿ ತರೂರ್

ಪ್ರಧಾನಿ ನರೇಂದ್ರ ಮೋದಿ ಅವರ 'ಮನತಟ್ಟುವ ಮಾತುಗಳಿಗೂ' ಮತ್ತು ವಾಸ್ತವಿಕತೆಗೂ ಭಾರಿ ಅಂತರ ಇದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮಂಗಳವಾರ...

ಮೋದಿ ಮಾತಿಗೂ, ವಾಸ್ತವಿಕತೆಗೂ ಭಾರಿ ಅಂತರ ಇದೆ: ಶಶಿ ತರೂರ್
ಶಶಿ ತರೂರ್
Published On :

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ 'ಮನತಟ್ಟುವ ಮಾತುಗಳಿಗೂ' ಮತ್ತು ವಾಸ್ತವಿಕತೆಗೂ ಭಾರಿ ಅಂತರ ಇದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮಂಗಳವಾರ ಹೇಳಿದ್ದಾರೆ.

ಮೋದಿ ಅವರ ವಾಕ್ಚಾತುರ್ಯ ಮತ್ತು ವಾಸ್ತವಿಕತೆಯ ನಡುವೆ ಭಾರಿ ಅಂತರ ಇದೆ. ಅವರು ಉತ್ತಮ ವಿಚಾರಗಳನ್ನು ಹೇಳುತ್ತಾರೆ. ಆದರೆ ಆ ಬಗ್ಗೆ ಗಮನ ಹರಿಸುವುದಿಲ್ಲ ಮಾಜಿ ಕೇಂದ್ರ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

ಒಬ್ಬ ವೈದ್ಯ ಬರೀ ಉತ್ತಮ ಸಲಹೆ ನೀಡುವುದರಿಂದ ಮಾತ್ರ ಕಾಯಿಲೆ ಗುಣಪಡಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಯ ಬರೆಯುವುದು ಬಹಳ ಮುಖ್ಯ ಎಂದು ತರೂರ್ ಹೇಳಿದ್ದಾರೆ.

ಪಾಕಿಸ್ತಾನ ವಿಷಯವನ್ನು ಪ್ರಸ್ತಾಪಿಸಿರುವ ತರೂರ್, ನಾಗರಿಕ ಶಕ್ತಿ ಹೆಚ್ಚಿದರೆ ಮತ್ತು ಸೇನಾ ಶಕ್ತಿ ಕುಗ್ಗಿದರೆ ಮಾತ್ರ ನೆರೆ ರಾಷ್ಟ್ರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದಿದ್ದಾರೆ.

'ಭಾರತದಲ್ಲಿ, ದೇಶ ಸೇನೆಯನ್ನು ಹೊಂದಿದೆ. ಆದರೆ ಪಾಕಿಸ್ತಾನದಲ್ಲಿ ಸೇನೆ ದೇಶವನ್ನು ಹೊಂದಿದೆ. ಭಾರತದಲ್ಲಿ ದೇಶ ರಕ್ಷಣೆಗೆ ಸೇನೆ ಸೇರುತ್ತಾರೆ. ಆದರೆ ಪಾಕಿಸ್ತಾನದಲ್ಲಿ, ದೇಶ ನಡೆಸಲು ಸೇನೆ ಸೇರುತ್ತಾರೆ' ತರೂರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.