ನಮಗೆ ಕುಂಟುನೆಪ ಬೇಡ, ನಿಜವಾದ ಒಆರ್‍ಒಪಿ ಬೇಕು: ನಿವೃತ್ತ ಯೋಧರು
ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಕ್ಕೆ ನಮ್ಮಿಂದ ಒಂದೇ ಒಂದು ಬೇಡಿಕೆ ಇದೆ. ಅದೇ ಒಆರ್‍ಒಪಿ ಯೋಜನೆ ಜಾರಿ. ನಮಗೆ ಸರ್ಕಾರದಿಂದ ಕುಂಟುನೆಪಗಳು ಬೇಡ. ನಿಜವಾದ ಒಆರ್‍ಒಪಿ ಯೋಜನೆ ಬೇಕು ಎಂದು ನಿವೃತ್ತ ಯೋಧರು ಶನಿವಾರ ಹೇಳಿದ್ದಾರೆ...

ನವದೆಹಲಿ: ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಕ್ಕೆ ನಮ್ಮಿಂದ ಒಂದೇ ಒಂದು ಬೇಡಿಕೆ ಇದೆ. ಅದೇ ಒಆರ್‍ಒಪಿ ಯೋಜನೆ ಜಾರಿ. ನಮಗೆ ಸರ್ಕಾರದಿಂದ ಕುಂಟುನೆಪಗಳು ಬೇಡ. ನಿಜವಾದ ಒಆರ್‍ಒಪಿ ಯೋಜನೆ ಬೇಕು ಎಂದು ನಿವೃತ್ತ ಯೋಧರು ಶನಿವಾರ ಹೇಳಿದ್ದಾರೆ.
ನಿವೃತ್ತ ಯೋಧರ ಬೇಡಿಕೆ ಈಡೇರಿಕೆ ಕೋರಿ ಇಂದು ನವದೆಹಲಿ ನಡೆಯುತ್ತಿರುವ ಗೌರವ್ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಸ್ತುತ ಜಾರಿ ಮಾಡಿರುವ ಒಆರ್‍ಒಪಿ ಯೋಜನೆಯಲ್ಲಿ ಹಲವು ನ್ಯೂನತೆಗಳಿದ್ದು, ನಮಗೆ ನಿಜವಾದ ಒಆರ್‍ಒಪಿ ಯೋಜನೆ ಜಾರಿಯಾಗಬೇಕಿದೆ. ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿವೃತ್ತ ಯೋಧರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
42 ವರ್ಷಗಳ ನಂತರ ನಮಗೆ ಇದೀಗ ಒಆರ್‍ಒಪಿ ಯೋಜನೆ ಜಾರಿಯಾಗಿದೆ. ಇದಕ್ಕೆ ನಮಗೆ ಸಂತೋಷವಿದೆ. ಪ್ರಧಾನಿಯವರಿಗೆ ನಾವು ಧನ್ಯವಾದವನ್ನೂ ಸಲ್ಲಿಸಿದ್ದೇವೆ. ಆದರೆ, ನ್ಯೂನತೆಗಳನ್ನೊಳಗೊಂಡಿರುವ ಒಆರ್‍ಒಪಿ ಯೋಜನೆಯನ್ನು ಹಿಂಪಡೆದು ನಿಜವಾದ ಒಆರ್‍ಒಪಿ ಯೋಜನೆ ಜಾರಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


