ಇಸ್ರೇಲ್ ನಿಂದ 10 ಸಶಸ್ತ್ರ ಕ್ಷಿಪಣಿ ಡ್ರೋನ್ ಖರೀದಿಗೆ ಕೇಂದ್ರ ಅಂಗೀಕಾರ
ಗಡಿಯಾಚೆಗಿನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿರುವ ಭಾರತ ಸರ್ಕಾರ ಇಸ್ರೇಲ್ ನಿಂದ 10 ಸಶಸ್ತ್ರ ಕ್ಷಿಪಣಿ ಖರೀದಿಗೆ ಅಂಗೀಕಾರ ನೀಡಿದೆ...

ನವದೆಹಲಿ: ಗಡಿಯಾಚೆಗಿನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿರುವ ಭಾರತ ಸರ್ಕಾರ ಇಸ್ರೇಲ್ ನಿಂದ 10 ಸಶಸ್ತ್ರ ಕ್ಷಿಪಣಿ ಖರೀದಿಗೆ ಅಂಗೀಕಾರ ನೀಡಿದೆ. ಸುಮಾರು 400 ಮಿಲಿಯನ್ ಡಾಲರ್ ವೆಚ್ಚದ ಡ್ರೋನ್ ಖರೀದಿ ಪ್ರಸ್ತಾವಕ್ಕೆ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭಾರತೀಯ ವಾಯುಸೇನೆ ಈ ಡ್ರೋನ್ ಗಳ ಜೊತೆ ಕಾರ್ಯ ನಿರ್ವಹಿಸಲಿದೆ, ಇವುಗಳಿಂದ ಶತ್ರ ದೇಶಗಳ ರಾಡಾರ್ ಯಂತ್ರವನ್ನು ಪತ್ತೆ ಹಚ್ಚಬಹುದಾಗಿದೆ. ಪ್ರಸಕ್ತ ವರ್ಷದ ಅಂತ್ಯದೊಳಗೆ ಈ ಡ್ರೋನ್ ಭಾರತೀಯ ವಾಯುಸೇನೆ ಸೇರಲಿವೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು 2012ರಲ್ಲೇ ಸಶಸ್ತ್ರ ಕ್ಷಿಪಣಿ ಡ್ರೋನ್ ಖರೀದಿಗೆ ಭಾರತೀಯ ವಾಯುಸೇನೆ ಒತ್ತಾಯಿಸಿತ್ತು. ಆದರ ಯುಪಿಎ ಸರ್ಕಾರ ಇದಕ್ಕೆ ಸಮ್ಮತಿಸಿರಲಿಲ್ಲ. ಆದರೆ ಮೋದಿ ಸರ್ಕಾರ ಸದ್ದಿಲ್ಲದೇ ಅತಿ ಶೀಘ್ರವಾಗಿ ಡ್ರೋನ್ ಖರೀದಿಗೆ ಒಪ್ಪಿಗೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


