ಉಬರ್ ಕ್ಯಾಬ್ ರೇಪ್ ಪ್ರಕರಣ: ಹೈಕೋರ್ಟ್ ಆದೇಶ ರದ್ದುಗೊಳಿಸಿದ 'ಸುಪ್ರೀಂ'
ಉಬರ್ ಕ್ಯಾಬ್‌ನಲ್ಲಿ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ಥೆಯ ಮರುವೈದ್ಯಕೀಯ...

ನವದೆಹಲಿ: ಉಬರ್ ಕ್ಯಾಬ್‌ನಲ್ಲಿ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ಥೆಯ ಮರುವೈದ್ಯಕೀಯ ಪರೀಕ್ಷೆಗೆ ಆದೇಶಿಸಿದ್ದ ದೆಹಲಿ ಹೈಕೋರ್ಟ್ ನ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
2015ರ ಮಾರ್ಚ್ 4 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ 13 ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ಥ ಯುವತಿಯ ಮರುವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿ, ಕ್ಯಾಬ್ ಚಾಲಕನಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜಗದೀಶ್ ಸಿಂಗ್ ಕೇಹರ್ ಹಾಗೂ ಆದರ್ಶ್ ಕುಮಾರ್ ಗೋಯೆಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ದೆಹಲಿ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಸಾಬೀತಾಗಿದ್ದರು. 13 ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ತೆಗೆ ಮರುವೈದ್ಯಕೀಯ ಪರೀಕ್ಷೆಗೆ ಆದೇಶಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಗುಡಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ (27) ಶುಕ್ರವಾರ ರಾತ್ರಿ ನವದೆಹಲಿಯ ಇಂದರ್‌ಲೋಕ ಪ್ರದೇಶದಲ್ಲಿರುವ ಮನೆಗೆ ಉಬರ್ ಟ್ಯಾಕ್ಸಿಯ ಮೂಲಕ ಹೋಗುತ್ತಿದ್ದಳು. ಕಾರಿನ ಹಿಂದಿನ ಸೀಟಿನಲ್ಲಿದ್ದ ಆಕೆಗೆ ಜೋಂಪು ಹತ್ತಿತ್ತು. ರಾತ್ರಿ 9.30ರ ಹೊತ್ತಿಗೆ ಆಕೆಗೆ ಎಚ್ಚರವಾದಾಗ ಟ್ಯಾಕ್ಸಿ ನಿರ್ಜನ ಸ್ಥಳದಲ್ಲಿ ನಿಂತಿತ್ತು. ಟ್ಯಾಕ್ಸಿ ಬಾಗಿಲು ಲಾಕ್ ಆಗಿದ್ದವು. ಆಕೆ ಕೂಗಿಕೊಳ್ಳಲು ಯತ್ನಿಸಿದಾಗ ಚಾಲಕ ಆಕೆಗೆ ಥಳಿಸಿ ಅತ್ಯಾಚಾರ ಎಸಗಿದ. ಆನಂತರ ಆಕೆಯ ಮನೆಯ ಬಳಿ ಡ್ರಾಪ್ ಮಾಡಿದ ಚಾಲಕ, ಬಾಯಿ ಬಿಟ್ಟರೆ ಕೊಂದುಹಾಕುವುದಾಗಿ ಬೆದರಿಕೆ ಹಾಕಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


