ದೇಶ

ಕೇಂದ್ರ ಆರೋಗ್ಯ ಸಚಿವ, ಛತ್ತೀಸ್‌ಗಢ ಸಿಎಂಗೆ ಕೊಟ್ಟ ನೀರಿನ ಬಾಟ್ಲಿಯಲ್ಲಿ ಹಾವಿನ ಮರಿ ಪತ್ತೆ!

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ನೀಡಿದ ಕುಡಿಯ ನೀರಿನ ಬಾಟಲಿಯಲ್ಲಿ ಹಾವಿನ ಮರಿ...

ಕೇಂದ್ರ ಆರೋಗ್ಯ ಸಚಿವ, ಛತ್ತೀಸ್‌ಗಢ ಸಿಎಂಗೆ ಕೊಟ್ಟ ನೀರಿನ ಬಾಟ್ಲಿಯಲ್ಲಿ ಹಾವಿನ ಮರಿ ಪತ್ತೆ!
ರಮಣ್ ಸಿಂಗ್
Published On :

ರಾಯ್‌ಪುರ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ನೀಡಿದ ಕುಡಿಯ ನೀರಿನ ಬಾಟಲಿಯಲ್ಲಿ ಹಾವಿನ ಮರಿ ಪತ್ತೆಯಾಗಿರುವ ಅತ್ಯಂತ ಅಘಾತಕಾರಿ ಘಟನೆ ಬುಧವಾರ ಬಿಜೆಪಿ ಪ್ರಧಾನ ಕಚೇರಿಯಲ್ಲೇ ನಡೆದಿದೆ.

ವರದಿಗಳ ಪ್ರಕಾರ, ಈ ಪ್ಯಾಕೇಜಡ್ ನೀರಿನ ಬಾಟಲಿಗಳು 'ಅಮನ್ ಅಖ್ವಾ' ಕಂಪನಿಗೆ ಸೇರಿದ್ದು ಎನ್ನಲಾಗಿದೆ.

ರಮಣ್ ಸಿಂಗ್ ಅವರ ವೈದ್ಯಕೀಯ ತಂಡದಲ್ಲಿದ್ದ ಮಹಿಳಾ ವೈದ್ಯೆಯೊಬ್ಬರು ಕುಡಿಯುವ ನೀರಿನ ಬಾಟಲಿಯಲ್ಲಿ ಹಾವಿನ ಮರಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳಿಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡುವ ಮುನ್ನ ತಪಾಸಣೆಗೆ ಒಳಪಡಿಸಬೇಕು. ಆದರೆ ಈ ಘಟನೆಯಲ್ಲಿ ತಪಾಸಣೆ ನಡೆಸಿಲ್ಲ.

ಅಮನ್ ಅಖ್ವಾ ರಾಯ್‌ಪುರ ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಸಯೀದ್ ಅಲಿ ಅಮನ್ ಮಾಲೀಕತ್ವದ ಕಂಪನಿ.

ಈ ಮಧ್ಯೆ, ಬಾಟಲಿ ನೀಡುವ ಮುನ್ನ ಓಪನ್ ಮಾಡಲಾಗಿತ್ತು. ಹೀಗಾಗಿ ಇದರ ಹಿಂದೆ ಯಾವುದೋ ಪಿತೂರಿ ಇದೆ ಎಂದು ಅಮನ್ ಕಂಪನಿ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.