ದೇಶ

ಬಿಹಾರದ 33 ಜಿಲ್ಲೆಗಳಲ್ಲಿ ಭಯಾನಕ ಕಾಲಾ ಅಜರ್ ರೋಗ ಪತ್ತೆ

ಬಿಹಾರದ 38 ಜಿಲ್ಲೆಗಳ ಪೈಕಿ 33 ಜಿಲ್ಲೆಗಳಲ್ಲಿ ಸಣ್ಣ ನೊಣಗಳಿಂದ ಹರಡುವ ಕಾಲಾ ಅಜರ್ ಎಂಬ ಭೀಕರ ಪಾರಾಸಿಟಿಕ್ ಕಾಯಿಲೆ ಕಾಣಿಸಿಕೊಂಡಿದೆ.

ಬಿಹಾರದ 33 ಜಿಲ್ಲೆಗಳಲ್ಲಿ ಭಯಾನಕ ಕಾಲಾ ಅಜರ್ ರೋಗ ಪತ್ತೆ
ಕಾಲಾ ಅಜರ್ ಹರಡುವ ನೊಣ
Published On :

ಪಾಟ್ನಾ: ಬಿಹಾರದ 38 ಜಿಲ್ಲೆಗಳ ಪೈಕಿ 33 ಜಿಲ್ಲೆಗಳಲ್ಲಿ ಸಣ್ಣ ನೊಣಗಳಿಂದ ಹರಡುವ ಕಾಲಾ ಅಜರ್ ಎಂಬ ಭೀಕರ ಪ್ಯಾರಾಸಿಟಿಕ್ ಕಾಯಿಲೆ ಕಾಣಿಸಿಕೊಂಡಿದೆ.
ಈವರೆಗೂ ಸಾವಿರಾರು ಜನರಿಗೆ ಕಾಲಾ ಅಜರ್ ಕಾಯಿಲೆ ಹರಡಿದೆ ಎಂದು ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ವರದಿ ಮಾಡಿದೆ. 33 ಜಿಲ್ಲೆಗಳ 11 ,000 ಗ್ರಾಮಗಳಲ್ಲಿ ಕಾಲಾ ಅಜರ್ ಕಾಣಿಸಿಕೊಂಡಿದೆ. ಸುಮಾರು 35 ಮಿಲಿಯನ್ ಜನರಿಗೆ ಈ ಕಾಯಿಲೆ ಹರಡುವ ಆತಂಕ ಎದುರಾಗಿದೆ.
ರಾಜ್ಯದಾದ್ಯಂತ ಲಸಿಕೆ  ಹಾಕಲಾಗುತ್ತಿದೆಯಾದರೂ ಕಾಲಾ ಅಜರ್ ಕಾಯಿಲೆ ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಎಂಎಸ್ಎಫ್ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಆರೋಗ್ಯ ಸಚಿವ, ನಿತೀಶ್ ಕುಮಾರ್ ಸರ್ಕಾರ ಕಾಲಾ ಅಜರ್ ರೋಗವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ. ಬಿಹಾರವನ್ನು ಶೀಘ್ರವೇ ಕಾಲಾ ಅಜರ್ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಾಯಿಲೆಯನ್ನು ಹರಡುತ್ತಿರುವ ನೊಣಗಳನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ. ಕಾಲಾ ಅಜರ್ ರೋಗವನ್ನು ವೈದ್ಯಕೀಯ ಪರಿಭಾಷೆಯಲ್ಲಿ ವಿಸೆರಲ್ ಲೀಶ್‌ಮೇನಿಯಾಸಿಸ್ ಎಂದು ಹೇಳುತ್ತಾರೆ.
ಜ್ವರ, ತೂಕ ಇಳಿಕೆ, ಹೃದಯ ಮತ್ತು ರಕ್ತನಾಳಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಕಾಲಾ ಅಜರ್ ನ ಮುಖ್ಯ ಲಕ್ಷಣಗಳಾಗಿವೆ. ಅನೈರ್ಮಲ್ಯದ ವಾತಾವರಣಗಳಿಂದ ಕಾಲಾ ಅಜರ್ ಕಾಯಿಲೆ ಹರಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.