ದೇಶ

ಬರ: ಮಕ್ಕಳಿಗೆ ಉಣ್ಣಲು ಆಹಾರವಿಲ್ಲ ಎಂದು ನೊಂದು ತಾಯಿ ಆತ್ಮಹತ್ಯೆ!

ಮಹಾರಾಷ್ಟ್ರದ ಬರಪೀಡಿತ ಪ್ರದೇಶವಾದ ಮರಾಠಾವಾಡದಲ್ಲಿ ತನ್ನ ಮಕ್ಕಳಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಿಂದ ತನ್ನ ಐವರು ಮಕ್ಕಳ ತಾಯಿಯೊಬ್ಬಳು ....

ಬರ: ಮಕ್ಕಳಿಗೆ ಉಣ್ಣಲು ಆಹಾರವಿಲ್ಲ ಎಂದು ನೊಂದು ತಾಯಿ ಆತ್ಮಹತ್ಯೆ!
ಆತ್ಮಹತ್ಯೆ ಮಾಡಿಕೊಂಡ ಮನೀಷಾ ಗಟ್ಕಾಲ್
Published On :

ಮುಂಬೈ:  ಮಹಾರಾಷ್ಟ್ರದ ಬರಪೀಡಿತ ಪ್ರದೇಶವಾದ ಮರಾಠಾವಾಡದಲ್ಲಿ ತನ್ನ ಮಕ್ಕಳಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಿಂದ ತನ್ನ ಐವರು ಮಕ್ಕಳ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಮರಾಠಾವಾಡದ ಒಸ್ಮಾನಾಬಾದ್ ಜಿಲ್ಲೆಯಲ್ಲಿ ರೈತ ಕುಟುಂಬದ 40 ಹರೆಯದ ಮನೀಷಾ ಗಟ್ಕಾಲ್ ಎಂಬ ಮಹಿಳೆ ಕಳೆದ ಶನಿವಾರ ಅಂದರೆ ದೇಶವಿಡೀ ರಕ್ಷಾಬಂಧನ ಆಚರಿಸುತ್ತಿದ್ದ ವೇಳೆ ಮನೆಯಲ್ಲೇ ಕಿಚ್ಚಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಬಿ ಗ್ರಾಮದಲ್ಲಿರುವ ಗಟ್ಕಾಲ್ ಮನೆಯಲ್ಲಿ ಉಣ್ಣಲು ಏನೂ ಇರಲಿಲ್ಲ. ಅವರ ಮಕ್ಕಳು ದಿನಾ ಆಹಾರವಿಲ್ಲದೇ ಮಲಗುತ್ತಿದ್ದರು.
ನಾವು ತುಂಬಾ ಬಡವರು. ನಮ್ಮ ಮನೆಯಲ್ಲಿ ತಿನ್ನಲು ಏನೂ ಇಲ್ಲ. ನನಗೆ ಕೆಲಸ ಕೂಡಾ ಇಲ್ಲ. ಆ ದಿನ ನಾನು ಕೆಲಸಕ್ಕೆಂದು ಹೊರಗೆ ಹೋದಾಗ ಆಕೆ ಮನೆಯೊಳಗೆ ಕಿಚ್ಚಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು  ಗಟ್ಕಾಲ್ ಅವರ ಪತಿ ಲಕ್ಷ್ಮಣ್  ಹೇಳಿದ್ದಾರೆ.

ಅವರಿಗೆ ಸಿಗುವ ಪಡಿತರ ಕೂಡಾ ಕಡಿಮೆ ಇತ್ತು. 18 ಕೆಜಿ ಗೋದಿ ಮತ್ತು 12 ಕೆಜಿ ಅಕ್ಕಿ. ಇದು ಏಳು ಮಂದಿಗೆ ಸಾಕಾಗುತ್ತಿರಲಿಲ್ಲ ಎಂದು ಗಟ್ಕಾಲ್‌ರ ಸಂಬಂಧಿಯೊಬ್ಬರು ಹೇಳಿದ್ದಾರೆ.

ಕಳೆದ ಮೂರು ವರ್ಷದಿಂದ ಮರಾಠಾವಾಡದಲ್ಲಿ ಬರಗಾಲವಿದೆ. ಆದ್ದರಿಂದಲೇ ಇಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ.

2014ರಲ್ಲಿ ಇಲ್ಲಿ 574 ರೈತರು ಆತ್ಮಹತ್ಯೆ ಮಾಡಿದ್ದರೆ, ಈ ವರ್ಷ ಈವರೆಗೆ 628 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.