ದೇಶ

ಸೆ.21ರವರೆಗೆ ಇಂದ್ರಾಣಿ ಮುಖರ್ಜಿ, ಶಾಮ್ ರೈಗೆ ನ್ಯಾಯಾಂಗ ಬಂಧನ

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, 9ಎಕ್ಸ್ ಮಾಧ್ಯಮ ಸಮೂಹದ ಸಹ ಸಂಸ್ಥಾಪಕ ಇಂದ್ರಾಣಿ ಮುಖರ್ಜಿ ಹಾಗೂ ಮತ್ತೊಬ್ಬ ಆರೋಪಿ, ಕಾರು...

ಸೆ.21ರವರೆಗೆ ಇಂದ್ರಾಣಿ ಮುಖರ್ಜಿ, ಶಾಮ್ ರೈಗೆ ನ್ಯಾಯಾಂಗ ಬಂಧನ
ಶೀನಾ ಬೋರಾ - ಇಂದ್ರಾಣಿ ಮುಖರ್ಜಿ
Published On :

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, 9ಎಕ್ಸ್ ಮಾಧ್ಯಮ ಸಮೂಹದ ಸಹ ಸಂಸ್ಥಾಪಕ ಇಂದ್ರಾಣಿ ಮುಖರ್ಜಿ ಹಾಗೂ ಮತ್ತೊಬ್ಬ ಆರೋಪಿ, ಕಾರು ಚಾಲಕ ಶ್ಯಾಮ್ ರೈಯನ್ನು ಸೆಪ್ಟೆಂಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಪೊಲೀಸರು ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನಿನ್ನೆ ಇಂದ್ರಾಣಿ ಅವರನ್ನು ಮುಂಬೈಯ ವೊರ್ಲಿಯಲ್ಲಿರುವ ನಿವಾಸಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದ ಮುಂಬೈ ಪೊಲೀಸರು, ಶೀನಾಳನ್ನು ಕೊಂದ ದಿವಸ ರಾತ್ರಿ ಇಂದ್ರಾಣಿಯವರ ನಿವಾಸದಲ್ಲಿ ಕಾರಿನಲ್ಲಿ ಶವವನ್ನು ಮಲಗಿಸಿ ಮರುದಿನ ಮಹಾರಾಷ್ಟ್ರದ ರಾಯಘಡಕ್ಕೆ ತೆಗೆದುಕೊಂಡು ಹೋಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಫಿಲ್ಮಿ ಸ್ಟೈಲ್ ನಲ್ಲಿ ಸಾಗುತ್ತಿರುವ ಕೊಲೆಯ ರಹಸ್ಯ ಇದೀಗ ಶೀನಾಳ ಶವವನ್ನು ಎಸೆಯಲು ಮಹಾರಾಷ್ಟ್ರದ ರಾಯ್ ಘಡ ಜಿಲ್ಲೆಯ ಅರಣ್ಯ ಪ್ರದೇಶವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.