ದೇಶ

ರಾಯ್‌ಘಡ ಅರಣ್ಯದಲ್ಲಿ ಪತ್ತೆಯಾದ ದೇಹದ ಭಾಗಗಳು ಶೀನಾ ಬೋರಾದ್ದೆ: ಡಿಎನ್‌ಎ ವರದಿ

ರಾಯ್‌ಘಡ ಅರಣ್ಯ ಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ದೇಹದ ಭಾಗಗಳು ಶೀನಾ ಬೋರಾದ್ದೆ ಎಂಬುದು ಡಿಎನ್‌ಎ ವರದಿಯಿಂದ...

ರಾಯ್‌ಘಡ ಅರಣ್ಯದಲ್ಲಿ ಪತ್ತೆಯಾದ ದೇಹದ ಭಾಗಗಳು ಶೀನಾ ಬೋರಾದ್ದೆ: ಡಿಎನ್‌ಎ ವರದಿ
ಶೀನಾ ಬೋರಾ(ಒಳ ಚಿತ್ರ), ಮೃತ ದೇಹ ಪತ್ತೆಯಾದ ಸ್ಥಳ
Published On :

ಮುಂಬೈ: ರಾಯ್‌ಘಡ ಅರಣ್ಯ ಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ದೇಹದ ಭಾಗಗಳು ಶೀನಾ ಬೋರಾದ್ದೆ ಎಂಬುದು ಡಿಎನ್‌ಎ ವರದಿಯಿಂದ ಸಾಭೀತಾಗಿದೆ.

ರಾಯ್‌ಘಡ ಅರಣ್ಯದಲ್ಲಿ ಪತ್ತೆಯಾದ ಮೂಳೆಗಳ ಹಾಗೂ ಇಂದ್ರಾಣಿ ಮುಖರ್ಜಿಯ ಡಿಎನ್‌ಎ ಮಾದರಿ ಒಂದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ, ಮಿಖಾಯಿಲ್ ಬೋರಾ ಡಿಎನ್‌ಎ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಮುಂಬೈ ಪೊಲೀಸರಿಗೆ ನೀಡಿದ್ದು, ಈ ವರದಿಯಲ್ಲೂ ಮಿಖಾಯಿಲ್ ಬೋರಾ ಡಿಎನ್‌ಎ ಮಾದರಿ ಹಾಗೂ ಇಂದ್ರಾಣಿ ಮುಖರ್ಜಿ ಡಿಎನ್‌ಎ ಮಾದರಿ ಒಂದೇ ಆಗಿದೆ.

ಶೀನಾಳನ್ನು ಕೊಂದು ಆಕೆಯ ಶವವನ್ನು ಒಂದು ರಾತ್ರಿ ತನ್ನ ನಿವಾಸದಲ್ಲಿ ಕಾರಿನಲ್ಲಿಟ್ಟದ್ದ ಇಂದ್ರಾಣಿ ಮುಖರ್ಜಿ, ಮರುದಿನ ಮಹಾರಾಷ್ಟ್ರದ ರಾಯಘಡಕ್ಕೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.