ಪಾತಕಿ ಹೆಂಡತಿಗೆ ಬೈ ಎಂದ ಪೀಟರ್
ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿ ರುವುದಾಗಿ ತಪೊ್ಪಪ್ಪಿಕೊಂಡಿರುವ ಇಂದ್ರಾಣಿ ಯೊಂದಿಗೆ ದಾಂಪತ್ಯ ಮುಂದುವರಿಸುವ...

ಮುಂಬೈ: ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿ ರುವುದಾಗಿ ತಪೊ್ಪಪ್ಪಿಕೊಂಡಿರುವ ಇಂದ್ರಾಣಿ ಯೊಂದಿಗೆ ದಾಂಪತ್ಯ ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಪೀಟರ್, ತಮ್ಮ ಪ್ರಕಾರ ತಮ್ಮ ವೈವಾಹಿಕ ಸಂಬಂಧ ಮುಗಿದ ಕಥೆ ಎಂದು ಹೇಳಿದ್ದಾರೆ.
ಶುಕ್ರವಾರ ತಡರಾತ್ರಿಯವರೆಗೆ ನಿರಂತರ 12 ಗಂಟೆ ಖಾರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಪೀಟರ್, ಪೊಲೀಸರೆ ದುರು ಆಡಿದ ಮಾತುಗಳಿವು. ಈ ಸಂಗತಿ ತಮ್ಮ ವಿವಾಹಿತ ಬದುಕಿನ ಶವಪೆಟ್ಟಿಗೆಯ ಕೊನೇ ಮೊಳೆಯಾಗಲಿದೆ ಎಂದು ಪ್ರತಿಕ್ರಿಯಿಸಿ ದರೆಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಕಸ್ಟಡಿ ವಿಸ್ತರಣೆ: ಶೀನಾ ಹತ್ಯೆಪ್ರಕರಣದ ಪ್ರಮುಖ ಆರೋಪಿಗಳಾದ ಇಂದ್ರಾಣಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಡೈವರ್ ಶ್ಯಾಮವರ್ ರಾಯï ಪೊಲೀಸ್ ಕಸ್ಟಡಿಯನ್ನು ಸ್ಥಳೀಯ ನ್ಯಾಯಾಲಯ ಸೆ.7ರವರೆಗೆ ವಿಸ್ತರಿಸಿದೆ.
ಶೀನಾ ಶವಕ್ಕೆ ಲಿಪ್‍ಸ್ಟಿಕ್!: ಶೀನಾ ಹತ್ಯೆಯ ಮಾರನೇ ದಿನ ಶವವನ್ನು ರಾಯಗಢಕ್ಕೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಹಜ ತಪಾಸಣೆ ವೇಳೆ ಎದುರಾಗಬಹುದಾದ ಅಪಾಯ ಗ್ರಹಿಸಿದ್ದ ಇಂದ್ರಾಣಿ ತನ್ನ ಮಗಳ ಶವಕ್ಕೆ ಲಿಪ್‍ಸ್ಟಿಕ್ ಹಚ್ಚಿ, ಕೂದಲು ಬಾಚಿ ದ್ದಳು! ಸ್ವತಃ ಇಂದ್ರಾಣಿಯೇ ಈ ಸತ್ಯವನ್ನು ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗಳ ಶವಕ್ಕೆ ಮೇಕಪ್ ಮಾಡುವ ಮೂಲಕ, ಒಂದು ವೇಳೆ ಮಾರ್ಗಮಧ್ಯ ನಾಕಾಬಂಧಿ ಪೊಲೀಸರು ಪ್ರಶ್ನಿಸಿದರೆ ಆಕೆ ಅನಾರೋಗ್ಯದಿಂದ ಬಳಲಿ ಮಲಗಿದ್ದಾಳೆ ಎಂದು ಪೊಲೀಸರಿಗೆ ಯಾಮಾರಿಸಲು ಉಪಾಯ ಮಾಡಿದ್ದಳು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


