ದೇಶ

16 ಬಾರಿ ಶ್ವೇತ ಧ್ವಜ ತೋರಿಸಿದರೂ ಪಾಕ್ ನಿಂದ ದಾಳಿ: ರಾಜನಾಥ್ ಸಿಂಗ್

ಭಾರತ ಎಂದಿಗೂ ಕದನ ವಿರಾಮ ಮಾಡುವುದಾಗಲಿ ಅಥವಾ ಸುಖಾಸುಮ್ಮನೆ ಗುಂಡಿನ ದಾಳಿ ಮಾಡುವುದಿಲ್ಲ. ಒಂದು ವೇಳೆ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿಯಾದರೆ ಈ ದಾಳಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ...

16 ಬಾರಿ ಶ್ವೇತ ಧ್ವಜ ತೋರಿಸಿದರೂ ಪಾಕ್ ನಿಂದ ದಾಳಿ: ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಭಾರತ ಎಂದಿಗೂ ಕದನ ವಿರಾಮ ಮಾಡುವುದಾಗಲಿ ಅಥವಾ ಸುಖಾಸುಮ್ಮನೆ ಗುಂಡಿನ ದಾಳಿ ಮಾಡುವುದಿಲ್ಲ. ಒಂದು ವೇಳೆ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿಯಾದರೆ ಈ ದಾಳಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಪಾಕಿಸ್ತಾನದ ದಾಳಿಗೆ ದಿಟ್ಟ ಉತ್ತರ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿನ್ನೆ ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕೆಲವು ತಿಂಗಳ ಹಿಂದಷ್ಟೇ ನಮ್ಮ ಐವರು ಯೋಧರು ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಗಡಿಯಲ್ಲಿ ನಿರ್ಮಾಣವಾಗಿತ್ತಿರುವ ಉದ್ವಿಗ್ನ ವಾತಾವರಣವನ್ನು ಪರಿಶೀಲಿಸಲು ನಾನು ವೈಯಕ್ತಿಕವಾಗಿ ಗಡಿ ಭದ್ರತಾ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಭೇಟಿ ನೀಡಿದ್ದ ವೇಳೆಯಲ್ಲಿಯೂ ಪಾಕಿಸ್ತಾನದ ಸೇನೆಯಿಂದ ಗುಂಡಿನ ದಾಳಿಯಾಗುತ್ತಿತ್ತು. ಹೀಗಾಗಿ ಶಾಂತಿ ಸಂಕೇತ ಶ್ವೇತ ಧ್ವಜವನ್ನು ಪ್ರದರ್ಶಿಸುವಂತೆ ನಮ್ಮ ಯೋಧರಿಗೆ ತಿಳಿಸಲಾಯಿತು.

ಸೂಚನೆಯಂತೆಯೇ ಯೋಧರು ಪಾಕ್ ಸೇನೆಗೆ ಶ್ವೇತ ಧ್ವಜವನ್ನು ಪ್ರದರ್ಶಿಸಿದರು. ಆದರೂ, ಇದನ್ನು ಲೆಕ್ಕಿಸದ ಪಾಕ್ ಸೇನೆಯು ಮತ್ತೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿತು. ಹೀಗೆಯೇ ಒಟ್ಟು 16 ಬಾರಿ ಭಾರತೀಯ ಯೋಧರು ಶ್ವೇತ ಧ್ವಜವನ್ನು ಪ್ರದರ್ಶಿಸಿದರು. ಎಷ್ಟು ಬಾರಿ ಬಿಳಿ ಬಾವುಟ ಪ್ರದರ್ಶಿಸಿದರೂ ಪಾಕ್ ನಿಂದ ದಾಳಿ ಮುಂದುವರೆಯುತ್ತಲೇ ಇತ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಉನ್ನತ ಮಟ್ಟಕ್ಕೆ ಹಾಗೂ ಉತ್ತಮ ರೀತಿಯಲ್ಲಿ  ಮುಂದುವರೆಸಲು ಭಾರತ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಇನ್ನು ಮುಂದೆಯೂ ಮಾಡುತ್ತಲೇ ಇರುತ್ತದೆ. ಇದೇ ವೇಳೆ ಭಾರತ-ಪಾಕಿಸ್ತಾನದ ನಡುವಿನ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಮುರಿದು ಬಿದ್ದುದ್ದರ ಕುರಿತಂತೆ ಮಾತನಾಡಿರುವ ಅವರು, ಮುಂದಿನ ದಿನಗಳಲ್ಲಿ ಪಾಕಿಸ್ತಾನ-ಭಾರತದ ನಡುವೆ ಶೀಘ್ರದಲ್ಲೇ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.