10 ಉಗ್ರರ ಸದೆಬಡಿದು ಹುತಾತ್ಮನಾದ ಯೋಧ: 11 ದಿನದಲ್ಲಿ 10 ಮಂದಿಯ ಕೊಂದ ವೀರ
ಹುತಾತ್ಮ ಯೋಧ ಲಾನ್ಸ್ ನಾಯ್ಕ್ ಮೋಹನ್ ನಾಥ್ ಗೋಸ್ವಾಮಿ ಅವರ ಸಾಹಸ ಶೌರ್ಯಕ್ಕೆ ವೀರಯೋಧ ಎಂಬ ಹೆಗ್ಗಳಿಕೆ...

ಶ್ರೀನಗರ: ಹುತಾತ್ಮ ಯೋಧ ಲಾನ್ಸ್ ನಾಯ್ಕ್ ಮೋಹನ್ ನಾಥ್ ಗೋಸ್ವಾಮಿ ಅವರ ಸಾಹಸ ಶೌರ್ಯಕ್ಕೆ ವೀರಯೋಧ ಎಂಬ ಹೆಗ್ಗಳಿಕೆ ಕೂಡ ಚಿಕ್ಕದು.
ಏಕೆಂದರೆ, ಕೇವಲ 11 ದಿನದಲ್ಲಿ 10 ಮಂದಿ ಉಗ್ರರನ್ನು ಸದೆಬಡಿದ ಅವರ ಹೋರಾಟದ ಕೆಚ್ಚನ್ನು ಬಣ್ಣಿಸಲು ಸೂಕ್ತ ಪದ ಗಳೇ ವಿರಳ. ಹಂದ್ವಾರದಲ್ಲಿ ಗುರುವಾರ ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವಿಶೇಷ ಪಡೆಯ ಕಮಾಂಡೋ ಮೋಹನ್ ನಾಥ್, ಭಯೋತ್ಪಾದನಾ ವಿರೋಧಿ ಹೋರಾಟಕ್ಕಾಗಿ ತಮ್ಮ ಜೀವವನ್ನೇ ತ್ಯಾಗಮಾಡಿದ್ದಾರೆ.
ಆ.23ರಂದು 3 ಪಾಕಿಸ್ತಾನಿ ಉಗ್ರರ ಕೊನೆಗಾಣಿಸಿದ ಕಾರ್ಯಾಚರಣೆಯಲ್ಲಿ ನಾಯ್ಕ್ ಭಾಗವಹಿಸಿದ್ದರು. ಅದರ ಬೆನ್ನಿಗೇ ಕಾಶ್ಮೀರದ ರಫಿಯಾಬಾ ದ್‍ನಲ್ಲಿ ಆ.26- 27ರಂದು 3 ಉಗ್ರರ ನಾಶಕ್ಕೆ ಕಾರಣವಾದ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದರು.
ಎಲ್‍ಇಟಿ ಉಗ್ರ ಸಜ್ಜದ್ ಅಹಮದ್‍ನನ್ನು ಈ ಕಾರ್ಯಾಚರಣೆಯಲ್ಲಿ ಜೀವಂತ ಸೆರೆ ಹಿಡಿಯಲಾಯಿತು. ಜತೆಗೆ ಕುಪ್ವಾರದಲ್ಲಿ ನಡೆದ ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲೂ ಮೋಹನ್ ನಾಥ್ ಪಾಲ್ಗೊಂಡು, ನಾಲ್ವರು ಉಗ್ರರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


