ಬದುಕು ನಡೆಸಲು ಕಸ ಎತ್ತುವ ರಾಷ್ಟ್ರೀಯ ಚಿನ್ನದ ಪದಕ ವಿಜೇತ ಬಾಕ್ಸರ್
ರಾಷ್ಟ್ರೀಯ ಮಟ್ಟದ ಆಟಗಾರ ಚಿನ್ನದ ಪದಕ ವಿಜೇತ ಬಾಕ್ಸರ್ ಕಮಲ್ ಕುಮಾರ್ ಈಗ ಬದುಕು ನಡೆಸಲು ಮನೆ ಮನೆಗೆ ಹೋಗಿ ಕಸ ಎತ್ತುತ್ತಾರೆ!

ಕಾನ್ಪುರ: ರಾಷ್ಟ್ರೀಯ ಮಟ್ಟದ ಆಟಗಾರ ಚಿನ್ನದ ಪದಕ ವಿಜೇತ ಬಾಕ್ಸರ್ ಕಮಲ್ ಕುಮಾರ್ ಈಗ ಬದುಕು ನಡೆಸಲು ಮನೆ ಮನೆಗೆ ಹೋಗಿ ಕಸ ಎತ್ತುತ್ತಾರೆ!
ದೇಶದ ಗೌರವಕ್ಕೆ ಪಾತ್ರನಾಗಬೇಕೆಂದ ಕನಸು ಹೊತ್ತಿದ್ದೆ ಎನ್ನುವ ಕಮಲ್, ಸರ್ಕಾರ ನನ್ನ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನನಗೆ ಯಾವುದೇ ಹಣಕಾಸಿನ ನೆರವು ದೊರೆಯಲಿಲ್ಲ ಎಂದಿದ್ದಾರೆ.
"ನಾನು ರಾಷ್ಟ್ರೀಯ ಮಟ್ಟದಲ್ಲಿ ಆಟ ಆಡಿದ ನಂತರವೂ ನಾಲ್ಕನೇ ದರ್ಜೆಯ ನೌಕರಿ ದೊರೆಯಿತು. ಈಗ ಬದುಕಲು ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿದ್ದೇನೆ. ನನ್ನ ಕುಟುಂಬವೂ ನನ್ನ ಮೇಲೆ ಅವಲಂಬಿತವಾಗಿದೆ" ಎಂದು ಅವರು ತಿಳಿಸಿದ್ದಾರೆ.
"ನನಗೆ ನಾಲ್ಕು ಜನ ಮಕ್ಕಳು ಅವರಲ್ಲಿ ಇಬ್ಬರು ಬಾಕ್ಸರ್ ಗಳು. ನನ್ನ ದೊಡ್ಡ ಮಗ ರಾಷ್ಟ್ರೀಯ ಮಟ್ಟದ ಬಾಕ್ಸರ್. ಅವನಿಗೆ ನಾನೇ ತರಬೇತಿ ನೀಡಿದ್ದೇನೆ. ನನಗೆ ಬಾಕ್ಸಿಂಗ್ ಅಂದರೆ ಹುಚ್ಚು ಆದರೆ ಅದಕ್ಕೆ ಅಗತ್ಯ ಹಣಕಾಸು ನೆರವು ದೊರೆಯಲಿಲ್ಲ. ನನ್ನ ಮಕ್ಕಳಾದರೂ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಾರೆ ಎಂದು ನಂಬಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


