ಗ್ಯಾಸ್ ಸಬ್ಸಿಡಿಗೆ ಮಾಜಿ ಸಚಿವ ಫಾರೂಕ್ ಅರ್ಜಿ
ಶ್ರೀಮಂತರು, ಸಂಸತ್ ಸದಸ್ಯರು, ಸಚಿವರು ಅಡುಗೆ ಅನಿಲ ಸಬ್ಸಿಡಿ ತ್ಯಾಗ ಮಾಡಿ ಎಂದು ಪ್ರಧಾನಿ ಮೋದಿ ಸಲಹೆ ಮಾಡಿದ್ದಾರೆ. ಆದರೆ ಕೇಂದ್ರದ ಮಾಜಿ ಸಚಿವ ಫಾರೂಕ್...

ಶ್ರೀನಗರ: ಶ್ರೀಮಂತರು, ಸಂಸತ್ ಸದಸ್ಯರು, ಸಚಿವರು ಅಡುಗೆ ಅನಿಲ ಸಬ್ಸಿಡಿ ತ್ಯಾಗ ಮಾಡಿ ಎಂದು ಪ್ರಧಾನಿ ಮೋದಿ ಸಲಹೆ ಮಾಡಿದ್ದಾರೆ. ಆದರೆ ಕೇಂದ್ರದ ಮಾಜಿ ಸಚಿವ ಫಾರೂಕ್ ಅಬ್ದುಲ್ಲಾ ತನಗೆ ಅಡುಗೆ ಅನಿಲ ಸಬ್ಸಿಡಿ ಬೇಕು ಎಂದು ಮನವಿ ಮಾಡಿದ್ದಾರೆ.
ಶ್ರೀನಗರದ ದುರ್ಗಾನಾಗ್ ಎಂಬಲ್ಲಿ ಎಚ್‍ಪಿ ಕಂಪನಿಗೆ ಅರ್ಜಿ ನೀಡಿದ್ದಾರೆ. ಅಂದ ಹಾಗೆ ಈ ಬೆಳವಣಿಗೆ ನಡೆದದ್ದು ಆ.14ರಂದು. ಈ ಬಗ್ಗೆ ಅಬ್ದುಲ್ಲಾರ ಪ್ರತಿಕ್ರಿಯೆ ಕೇಳಲು ಬಯಸಿದಾಗ ಆಪ್ತ ಕಾರ್ಯದರ್ಶಿ 'ಸಾಹೇಬರು ಮೀಟಿಂಗ್ ನಲ್ಲಿದ್ದಾರೆ'' ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ ರು.10 ಕೋಟಿ ಆದಾಯ ಇದೆ. ರು.13 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


