ಬಿಹಾರಿಗರು ಬುದ್ಧಿವಂತರು, ಕಠಿಣ ಶ್ರಮ ಜೀವಿಗಳು: ಪ್ರಧಾನಿ ಮೋದಿ
ಬಿಹಾರಿಗರು ಬುದ್ಧಿವಂತ ಹಾಗೂ ಶ್ರಮದಾಯಿ ಜನರಾಗಿದ್ದು, ಇಂತಹ ಜನರಿರುವ ರಾಜ್ಯವು ಅಭಿವೃದ್ಧಿ ಕಾಣುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ...

ಮಧುಬಾನಿ: ಬಿಹಾರಿಗರು ಬುದ್ಧಿವಂತ ಹಾಗೂ ಶ್ರಮದಾಯಿ ಜನರಾಗಿದ್ದು, ಇಂತಹ ಜನರಿರುವ ರಾಜ್ಯವು ಅಭಿವೃದ್ಧಿ ಕಾಣುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಪ್ರಯುಕ್ತ ಇಂದು ಬಿಹಾರ ಮಧುಬಾನಿಯಲ್ಲಿ ಮಾತನಾಡಿರುವ ಅವರು, ಬಿಹಾರ ರಾಜ್ಯದಲ್ಲಿರುವ ಜನರು ಅತೀ ಬುದ್ಧಿವಂತರು, ಶ್ರಮದಾಯಿ ಹಾಗೂ ಸೃಜನಶೀಲತೆಯನ್ನು ಹೊಂದಿರುವ ರಾಜ್ಯವಾಗಿದ್ದು, ರಾಜ್ಯವು ಅಭಿವೃದ್ಧಿಯಾಗುವ ಅಗತ್ಯವಿದೆ. ಬಿಹಾರದಲ್ಲಿ ಬಿಜೆಪಿ ಗೆದ್ದಿದ್ದೇ ಆದರೆ, ಅಭಿವೃದ್ಧಿಯನ್ನು ನಮ್ಮ ಪಕ್ಷ ಮಾಡಲಿದೆ. ಇಲ್ಲಿರುವ ಜನರ ಸಾಕಷ್ಟು ವ್ಯವಸ್ಥೆಗಳನ್ನು ನಾವು ಸರಿಪಡಿಸುತ್ತವೆ. ಹಿರಿಯರಿಗೆ ವೈದ್ಯಕೀಯ ವ್ಯವಸ್ಥೆ, ಶಿಕ್ಷಣ ಹಾಗೂ ಉದ್ಯೋಗದಂತಹ ಹಲವು ವ್ಯವಸ್ಥೆಗಳನ್ನು, ಸೌಲಭ್ಯಗಳನ್ನು ನಾವು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಎನ್ ಡಿಎ ಸರ್ಕಾರ ಬಿಹಾರದಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಲಾಲೂ, ನಿತೀಶ್ ವಿರುದ್ಧ ಕಿಡಿಕಾರಿದ ಅವರು, ಲಾಲೂ ಜೀ, ನಿತೀಶ್ ಜೀ ಅವರು ಬಿಹಾರದಲ್ಲಿ 25 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು. ಆದರೆ, ಈ 25 ವರ್ಷದಲ್ಲಿ ಅವರು ಜನರಿಗೆ ಏನನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿರುವ ಜನರಿಗೆ ಈ ವರೆಗೂ ಸಹಿ ಹಾಕಲು ಕೂಡ ಬರುತ್ತಿಲ್ಲ.
ಇದೀಗ ರ್ಯಾಲಿಯಲ್ಲಿ ಸೇರಿರುವ ಜನರನ್ನು ನೋಡಿದರೆ ನಿಮ್ಮ ಬೆಂಬಲ ಎಷ್ಟಿದೆ ಎಂಬುದು ಅರ್ಥವಾಗುತ್ತಿದೆ. ನಿಮ್ಮ ಕನಸನ್ನು ಸಂಪೂರ್ಣಗೊಳಿಸಲು ನನಗೆ ನಿಮ್ಮ ಬೆಂಬಲ ಅಗತ್ಯವಿದೆ. ನಿಮ್ಮ ಮತದಿಂದ ನಾವು ನಿಮ್ಮ ಕನಸನ್ನು ನನಸು ಮಾಡುತ್ತೇವೆ. ಇಲ್ಲಿರುವ ವಾತಾವರಣವನ್ನು ಗಮನಿಸಿದರೆ ಬದಲಾವಣೆಯನ್ನು ಇಲ್ಲಿನ ಜನರು ಬಯಸುತ್ತಿದ್ದಾರೆಂಬುದು ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


