ದಾವೂದ್‌ಗೆ ವಯೋಸಹಜ ಕಾಯಿಲೆ?
ರಾಜತಾಂತ್ರಿಕ ಒತ್ತಡವನ್ನು ಹೇರಿ ದಾವೂದ್‌ನ್ನು ವಾಪಾಸ್ ಕರೆತರುವುದಕ್ಕೆ ಭಾರತ ಪ್ರಯತ್ನಿಸುತ್ತಿದೆ. ಸೌದಿ ಅರೇಬಿಯಾದಲ್ಲಿ ತಾನು...

Published On :
ಬೆಂಗಳೂರು: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ವಯಸ್ಸಾಗುತ್ತಿದ್ದರೂ ಗುಪ್ತಚರ ದಳದವರಿಗೆ ಅವನೆಂದಿಗೂ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ. ಅವನ ತಲೆಕೂದಲು ಉದುರಿವೆ, ಅವನೀಗ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಭಾರತದ ಗುಪ್ತಚರ ದಳ ಹೇಳುತ್ತಿದ್ದೆ.
ರಾಜತಾಂತ್ರಿಕ ಒತ್ತಡವನ್ನು ಹೇರಿ ದಾವೂದ್‌ನ್ನು ವಾಪಾಸ್ ಕರೆತರುವುದಕ್ಕೆ ಭಾರತ ಪ್ರಯತ್ನಿಸುತ್ತಿದೆ. ಸೌದಿ ಅರೇಬಿಯಾದಲ್ಲಿ ತಾನು ಹೊಂದಿರುವ ಸೊತ್ತುಗಳನ್ನು ಬಚ್ಚಿಡುವಂತೆ ದಾವೂದ್ ಅಲ್ಲಿಯವರಿಗೆ ಹೇಳಿದ್ದಾನಂತೆ. ಪಾಕಿಸ್ತಾನಕ್ಕೆ ಶೇಖ್ ದಾವೂದ್‌ನಿಂದ ಸಿಗುವ ಸಹಾಯಗಳೆಲ್ಲವೂ ಅಂತ್ಯಗೊಂಡರೂ ಐಎಸ್‌ಐ ಅದನ್ನು ಒಪ್ಪುವುದಿಲ್ಲ. ದಾವೂದ್ ಐಎಸ್‌ಐ ಸುರಕ್ಷಾ ವಲಯದಲ್ಲೇ ಬದುಕುತ್ತಾನೆ, ಅಲ್ಲೇ ಸಾಯುತ್ತಾನೆ. ಐಎಸ್‌ಐಗೆ ಆರ್ಥಿಕ ಸಹಾಯ ನೀಡುವವನು ದಾವೂದ್. ಆತನಿಗೆ ಹೆಚ್ಚು ಆದಾಯಬರುವ ಮೂಲವೂ ಭಾರತವೇ ಆಗಿದೆ. ರಿಯಲ್ ಎಸ್ಟೇಟ್, ದರೋಡೆ, ಅಪಹರಣ, ಹವಾಲಾ, ಕಪ್ಪು ಹಣ, ಮಾದಕ ವಸ್ತು, ಆಯುಧ ಸಾಗಣೆ, ಮನುಷ್ಯ ಸಾಗಣೆ ಮೊದಲಾದವುಗಳ ಮೂಲಕ ದಾವೂದ್ ನಕಲಿ ಹಣಗಳನ್ನು ಬಳಸುತ್ತಿದ್ದಾನೆ. ಎಲ್ಲಾ ಕಡೆ ಡಿ ಕಂಪನಿಯ ಸಾನಿಧ್ಯ ಇದ್ದೇ ಇದೆ ಎಂದು ಗುಪ್ತಚರ ದಳದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


