ದೇಶ

ಸರ್ಕಾರದಲ್ಲಿ ಭಾಗಿಯಾಗಿಲ್ಲದ ನೋವು ಶೌರಿಯವರಿಗಿರಬಹುದು: ಬಿಜೆಪಿ

ಕೇಂದ್ರ ಸರ್ಕಾರ ಆರ್ಥಿಕ ನಿರ್ವಹಣೆಗಿಂತ ಹೆಚ್ಚಾಗಿ ಮಾಧ್ಯಮಗಳಲ್ಲಿ ಸುದ್ದಿ ಮಾಡುವುದೇ ಹೆಚ್ಚು ಎಂದು ಕೇಂದ್ರ...

ಸರ್ಕಾರದಲ್ಲಿ ಭಾಗಿಯಾಗಿಲ್ಲದ ನೋವು ಶೌರಿಯವರಿಗಿರಬಹುದು: ಬಿಜೆಪಿ
ಕೇಂದ್ರ ಮಾಜಿ ಸಚಿವ ಅರುಣ್ ಶೌರಿ
Published On :

ನವದೆಹಲಿ: ಕೇಂದ್ರ ಸರ್ಕಾರ ಆರ್ಥಿಕ ನಿರ್ವಹಣೆಗಿಂತ ಹೆಚ್ಚಾಗಿ ಮಾಧ್ಯಮಗಳಲ್ಲಿ ಸುದ್ದಿ ಮಾಡುವುದೇ ಹೆಚ್ಚು ಎಂದು ಕೇಂದ್ರ ಮಾಜಿ ಸಚಿವ ಅರುಣ್ ಶೌರಿ ಮಾಡಿರುವ ಟೀಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬಿಜೆಪಿ, ಅರುಣ್ ಶೌರಿಯವರು ಎನ್ ಡಿಎ ಸರ್ಕಾರದ ಭಾಗವಾಗಿಲ್ಲದ ಕಾರಣದಿಂದ ನೋವು ಮತ್ತು ಹತಾಶೆಯಿಂದ ಹೀಗೆ ನುಡಿಯುತ್ತಿದ್ದಾರೆ ಎಂದು ಹೇಳಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಿದ್ಧಾರ್ಥ್ ನಾಥ್, ಎನ್ ಡಿಎ ಸರ್ಕಾರದಲ್ಲಿ ಇನ್ನು ಯಾವತ್ತಿಗೂ ಅವರಿಗೆ ಯಾವುದೇ ಸ್ಥಾನ ಸಿಗದಿರುವ ನೋವು ಅವರನ್ನು ಎಲ್ಲೋ ಕಾಡುತ್ತಿದೆ. ಆದುದರಿಂದ ಅವರು ಈ ರೀತಿ ಮಾತನಾಡಿರಬಹುದು ಎಂದು ಹೇಳಿದ್ದಾರೆ.

 ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಅಲ್ಪಸಂಖ್ಯಾತ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಅರುಣ್ ಶೌರಿಯವರು ಈಗ ಹೊಂದಿರುವ ಸ್ನೇಹಿತರ ಸಂಪರ್ಕ ಅವರನ್ನು ಹೀಗೆ ಮಾತನಾಡಿಸುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.