ಪಾಕಿಸ್ತಾನ ಗೀತಾಳನ್ನು ವಾಪಸ್ ಕಳಿಸಿದಂತೆ ರಂಜಾನ್ ನನ್ನೂ ವಾಪಸ್ ಕಳಿಸಲಿರುವ ಭಾರತ
ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದ ಗೀತಾ 15 ವರ್ಷಗಳ ನಂತರ ಭಾರತಕ್ಕೆ ವಾಪಸ್ಸಾಗಿರುವ ಬೆನ್ನಲ್ಲೇ ರಂಜಾನ್ ಎಂಬ ಪಾಕಿಸ್ತಾನದ ಯುವಕನೊಬ್ಬ ಭಾರತದಲ್ಲಿರುವ ಪ್ರಕರಣ ಬಹಿರಂಗವಾಗಿದೆ.

ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದ ಗೀತಾ 15 ವರ್ಷಗಳ ನಂತರ ಭಾರತಕ್ಕೆ ವಾಪಸ್ಸಾಗಿರುವ ಬೆನ್ನಲ್ಲೇ ರಂಜಾನ್ ಎಂಬ ಪಾಕಿಸ್ತಾನದ ಯುವಕನೊಬ್ಬ ಭಾರತದಲ್ಲಿರುವ ಪ್ರಕರಣ ಬಹಿರಂಗವಾಗಿದೆ.
ಗೀತಾ ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ರಂಜಾನ್ ಎಂಬ ಪಾಕಿಸ್ತಾನ ಯುವಕನಲ್ಲೂ ತವರಿಗೆ ವಾಪಸ್ ತೆರಳುವ ಭರವಸೆ ಮೂಡಿದೆ. ಪ್ರಧಾನಿ ಕಾರ್ಯಾಲಯದ ಮಾಹಿತಿ ಪ್ರಕಾರ, ಭಾರತ ಸರ್ಕಾರ ರಂಜಾನ್ ಪ್ರಕರಣದ ಬಗ್ಗೆ ಮರು ನಿರ್ಣಯ ಕೈಗೊಳ್ಳಲಿದ್ದು, ವಾಪಸ್ ಕಳಿಸುವ ಬಗ್ಗೆ ಚಿಂತನೆ ನಡೆಸಿದೆ.
15 ವರ್ಷದ ಮೊಹಮ್ಮದ್ ರಂಜಾನ್, ನಾಲ್ಕು ವರ್ಷಗಳ ಹಿಂದೆ ಬಾಂಗ್ಲಾ ದೇಶದಿಂದ ಭಾರತಕ್ಕೆ ಆಕಸ್ಮಿಕವಾಗಿ ಬಂದಿದ್ದ. ತಂದೆ ಹಾಗೂ ಮಲತಾಯಿ ನೀಡುತ್ತಿದ್ದ ಕಿರುಕುಳ ತಾಳಲಾರದೇ ಮೊಹಮ್ಮದ್ ರಂಜಾನ್ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ.
ರಂಜಾನ್ ನ ತಂದೆ ಬಾಂಗ್ಲಾ ದೇಶದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ. ಪಾಕಿಸ್ತಾನಕ್ಕೆ ಸೇರಿದ ಯುವಕನನ್ನು 2013 ರಲ್ಲಿ ಬಂಧಿಸಲಾಗಿತ್ತು. ಗೀತಾ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನ್ಸರ್ ಬರ್ನಿ ಅವರು ರಂಜಾನ್ ಬಿಡುಗಡೆಗೂ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಕಾರ್ಯಾಲಯದ ಸಲಹೆಗಾರ ಅಶುತೋಷ್ ಶುಕ್ಲಾ ರಂಜಾನ್ ಗೆ ಸಂಬಂಧಿಸಿದ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿರುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


