ಮೋದಿಯವರೇ ಸುಳ್ಳು ಹೇಳೋದು ಬಿಟ್ಟು ಕೆಲಸ ಮಾಡಿ: ರಾಹುಲ್ ಗಾಂಧಿ
ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಈ ಹಿಂದೆ ಮೋದಿಯವರು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಆದಾವ ಭರವಸೆಯೂ ಇಂದಿಗೂ ಈಡೇರಿಲ್ಲ. ಮೋದಿಯವರೇ ಮೊದಲು ಸುಳ್ಳು ಹೇಳುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ...
ಬಿಹಾರ: ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಈ ಹಿಂದೆ ಮೋದಿಯವರು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಆದಾವ ಭರವಸೆಯೂ ಇಂದಿಗೂ ಈಡೇರಿಲ್ಲ. ಮೋದಿಯವರೇ ಮೊದಲು ಸುಳ್ಳು ಹೇಳುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಹೇಳಿದ್ದಾರೆ.
ಮೂರನೇ ಹಂತದ ಬಿಹಾರ ವಿಧಾನಸಭಾ ಚುನಾವಣೆ ಪ್ರಯುಕ್ತ ಇಂದು ಬಿಹಾರದ ಮೋತಿಹಾರ್ ನಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ದುಬಾರಿ ವೆಚ್ಚದಲ್ಲಿ ಹೊಳೆಯುವ ಸೂಟುಬೂಟುಗಳನ್ನು ಹಾಕಿಕೊಂಡು ಪ್ರಪಂಚದಾದ್ಯಂತ ಓಡಾಡುತ್ತಿದ್ದಾರೆ. ಆದರೆ, ಸಂಕಷ್ಟದಲ್ಲಿ ನರಳುತ್ತಿರುವ ರೈತರು ಹಾಗೂ ದಲಿತರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ. ಅಧಿಕಾರಕ್ಕೆ ಬರುವಾಗ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಹೇಳಿದ್ದರು. ಆದರೆ, ಅದಾವುದೂ ಈವರೆಗೂ ಆಗಿಲ್ಲ. ನನಗೆ ಗೊತ್ತಿದೆ. ಇದೊಂದು ಆರ್ ಎಸ್ಎಸ್ ನೀಡಿರುವ ತರಬೇತಿಯೆಂದು. ಮೋದಿಯವರೇ ನಿಮ್ಮಲ್ಲಿ ಮನವಿ ಮಾಡುತ್ತೇನೆ ದಯವಟ್ಟು ಸುಳ್ಳು ಹೇಳುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಹೇಳಿದ್ದಾರೆ.
ಈ ಹಿಂದೆ ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾದ್ರಿಗೆ ಭೇಟಿ ನೀಡಿದ್ದೆ. ದಾದ್ರಿ ಪ್ರಕರಣದಿಂದ ತಿಳಿದುಬರುತ್ತಿದೆ. ಬಿಜೆಪಿಯವರು ಹಿಂದು ಮತ್ತು ಮುಸ್ಲಿಮರ ನಡುವೆ ಹೊಡೆದಾಟ ಆರಂಭವಾಗುವಂತೆ ಮಾಡುತ್ತಿದ್ದಾರೆಂಬುದು. ಇದಕ್ಕೆ ಉದಾಹರಣೆಯಂತೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕೂಡ ಇಂಥಹದ್ದೇ ಘಟನೆಗಳು ನಡೆಯಿತು. ಹರಿಯಾಣದಲ್ಲೂ ದಲಿತ ಜನಾಂಗದ ಇಬ್ಬರು ಮಕ್ಕಳನ್ನು ಸಜೀವವಾಗಿ ದಹಿಸಲಾಗಿದೆ. ಪ್ರಕರಣ ಸಂಬಂಧ ನಾನು ಮಕ್ಕಳ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗಿದ್ದೆ. ಈ ವೇಳೆ ಅಲ್ಲಿನ ಮುಖ್ಯಮಂತ್ರಿಗಳು ಈವರೆಗೂ ಭೇಟಿ ಮಾಡಿಲ್ಲ ಎಂಬ ವಿಚಾರ ತಿಳಿದುಬಂದಿತು.
ಬಿಜೆಪಿ ನಾಯಕರು ಇಂದು ದಲಿತರನ್ನು ನಾಯಿಗಳಿಗೆ ಹೋಲಿಕೆ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ಸರ್ಕಾರ ಬಿಹಾರ ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಭದ್ರತೆಯನ್ನು ನೀಡುತ್ತದೆ. ಸರ್ಕಾರವನ್ನು ಹೇಗೆ ನಡೆಸಬೇಕೆಂಬುದು ನಮ್ಮ ಸರ್ಕಾರಕ್ಕೆ ತಿಳಿದಿದೆ. ಹಾಗಾಗಿಯೇ ನಾವು ಈ ಹಿಂದೆ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದವು. ಭಾರತದಲ್ಲಿರುವ ಅದೆಷ್ಟೋ ಜನರನ್ನು ನಮ್ಮ ಸರ್ಕಾರ ಬಡತನದಿಂದ ಹೊರತಂದಿತ್ತು. ಈಗಲೂ ಬಿಹಾರದ ಜನತೆಗೆ ಅದೇ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನಮ್ಮದು ಸೂಟುಬೂಟು ಸರ್ಕಾರವಲ್ಲ. ಚುನಾವಣೆ ಪ್ರಯುಕ್ತ ಇದೀಗ ಬಿಹಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಜೆಪಿಯವರು ಚುನಾವಣೆ ನಂತರ ಕಣ್ಮರೆಯಾಗಿಬಿಡುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿರುವ ಅವರು, ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ಅವರೇ ಅಧಿಕಾರಕ್ಕೆ ಬರಲಿದ್ದಾರೆ. ಕಾಂಗ್ರೆಸ್, ಜೆಡಿಯು ಮತ್ತು ಆರ್ ಜೆಡಿ ಎಲ್ಲವೂ ಒಟ್ಟಾಗಿ ಸೇರಿ ಬಿಹಾರದ ವರ್ಚಸ್ಸನ್ನು ಬದಲಿಸಲಿದೆ. ನಮ್ಮ ಒಗ್ಗಟ್ಟಿನಿಂದ ಒಂದೊಂದೇ ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ಹೊಡೆದೋಡಿಸುತ್ತೇವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

