ದೇಶ

68ನೇ ವರ್ಷಾಚರಣೆ ಆಚರಿಸಲಿರುವ ಜಮ್ಮು-ಕಾಶ್ಮೀರ

ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿ ಜಮ್ಮು-ಕಾಶ್ಮೀರ ರಾಜ್ಯ ಸೇರ್ಪಡೆಗೊಂಡ 68ನೇ ವರ್ಷಾಚರಣೆ ನಾಡಿದ್ದು 27ನೇ...

68ನೇ ವರ್ಷಾಚರಣೆ ಆಚರಿಸಲಿರುವ ಜಮ್ಮು-ಕಾಶ್ಮೀರ
ಸಾಂದರ್ಭಿಕ ಚಿತ್ರ
Published On :

ಶ್ರೀನಗರ: ಭಾರತ   ಒಕ್ಕೂಟದ   ಅವಿಭಾಜ್ಯ   ಅಂಗವಾಗಿ   ಜಮ್ಮು-ಕಾಶ್ಮೀರ   ರಾಜ್ಯ   ಸೇರ್ಪಡೆಗೊಂಡ  68ನೇ  ವರ್ಷಾಚರಣೆ, ನಾಡಿದ್ದು  27ನೇ  ತಾರೀಖಿನಂದು ನಡೆಯಲಿದ್ದು, ಈ  ಸಂಭ್ರಮಾಚರಣೆಗಾಗಿ  ಅಂದು ರಾಜ್ಯದ  ಜನತೆ  ತಮ್ಮ  ಮನೆ-ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್ ಪಕ್ಷ ಮನವಿ ಮಾಡಿದೆ.

ಪಕ್ಷದ ಅಧ್ಯಕ್ಷ  ಮತ್ತು  ಮಾಜಿ  ಸಚಿವ  ಹರ್ಷ  ದೇವ್  ಸಿಂಗ್  ಜಮ್ಮು  ನಗರದಲ್ಲಿ  ಮಾತನಾಡಿ, ಈ  ಸಂದರ್ಭದಲ್ಲಿ  ರಾಷ್ಟ್ರದ  ಹೆಮ್ಮೆ  ಮತ್ತು ಗೌರವಗಳನ್ನು ಎತ್ತಿ ಹಿಡಿಯುವ ಪ್ರತೀಕವಾಗಿ ಜನತೆ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. 1947ರ ಅಕ್ಟೋಬರ್
27ರಂದು  ದೆಹಲಿಯಲ್ಲಿ  ನಡೆದ  ಸಭೆಯಲ್ಲಿ  ಭಾರತದ  ಗೌರ್ನರ್  ಜನರಲ್  ಆಗಿದ್ದ  ಲಾರ್ಡ್  ಮೌಂಟ್  ಬ್ಯಾಟನ್  ಜಮ್ಮು ಕಾಶ್ಮೀರವನ್ನು  ಭಾರತ ಒಕ್ಕೂಟಕ್ಕೆ  ಸೇರಿಸಿಕೊಳ್ಳುವ ಒಪ್ಪಂದಕ್ಕೆ  ಸಹಿ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.