ಕಾಂಡೋಮ್ ಗಳಿಗೆ ದರಮಿತಿ ಇಲ್ಲ
ಕಾಂಡೋಮ್ ಔಷಧವಲ್ಲ. ಆದ್ದರಿಂದ ಅದರ ಮೇಲೆ ದರಮಿತಿ ಹೇರುವಂತಿಲ್ಲ. ಇದು ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು. ಈ ಮೂಲಕ ಕಾಂಡೋಮ್ ಗೆ ದರಮಿತಿ ಹೇರಿ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ನೀಡಿದ್ದ ಆದೇಶವನ್ನು ಕೋರ್ಟ್ ರದ್ದುಪಡಿಸಿದೆ...

ಚೆನ್ನೈ: ಕಾಂಡೋಮ್ ಔಷಧವಲ್ಲ. ಆದ್ದರಿಂದ ಅದರ ಮೇಲೆ ದರಮಿತಿ ಹೇರುವಂತಿಲ್ಲ. ಇದು ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು. ಈ ಮೂಲಕ ಕಾಂಡೋಮ್ ಗೆ ದರಮಿತಿ ಹೇರಿ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ನೀಡಿದ್ದ ಆದೇಶವನ್ನು ಕೋರ್ಟ್ ರದ್ದುಪಡಿಸಿದೆ.
ಈ ಹಿಂದೆ ಇದೇ ಆದೇಶವನ್ನು ಬೇರೆ ಕಕ್ಷಿದಾರರಿಗೆ ದೆಹಲಿಹೈಕೋರ್ಟ್ ನೀಡಿತ್ತು. ಆಆದೇಶವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಖಾಸಗಿ ಸಂಸ್ಥೆಯೊಂದು ಕೋರ್ಟ್ ಮೆಟ್ಟಿಲೇರಿತ್ತು. ಕಾಂಡೋಮ್ ಗಳಿಗೆ ದರಮಿತಿ ಹೇರುವ ಮೂಲಕ ಕಾನೂನಿನ ಮಿತಿಯನ್ನು ಪ್ರಾಧಿಕಾರ ಮೀರಿದೆ. ನಿರ್ದಿಷ್ಟ ಶಕ್ತಿ ಮತ್ತು ಪ್ರಮಾಣದ ಔಷಧೀಯ ವಸ್ತುಗಳಿಗೆ ಮಾತ್ರ ದರಮಿತಿ ಹೇರಬಹುದೆಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಕಾಂಡೋಮ್ ಗಳ ವಿಚಾರದಲ್ಲಿ ಶಕ್ತಿ ಮತ್ತು ಪ್ರಮಾಣದ ವ್ಯಾಖ್ಯೆ ಸ್ಪಷ್ಟವಾಗಿಲ್ಲ. ಅದ್ದರಿಂದ ಕಾನೂನು ಪ್ರಕಾರ ದರಮಿತಿ ವಿಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
ಹೈಕೋರ್ಟ್ ತೀರ್ಪು
-ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ದರ ನಿಗದಿ ಮಾಡಿ ನೀಡಿತ್ತು ಆದೇಶ
-ಕಾಂಡೋಮ್ ಔಷಧವಲ್ಲ ಎಂದು ಆದೇಶ ರದ್ದು ಮಾಡಿದ ಕೋರ್ಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


