ದೇಶ

ಆಂಧ್ರ ಪ್ರದೇಶ ನೂತನ ರಾಜಧಾನಿ ಅಮರಾವತಿಗೆ ಪ್ರಧಾನಿ ಶಂಕುಸ್ಥಾಪನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ಶಂಕು ಸ್ಥಾಪನೆ...

ಆಂಧ್ರ ಪ್ರದೇಶ ನೂತನ ರಾಜಧಾನಿ ಅಮರಾವತಿಗೆ ಪ್ರಧಾನಿ ಶಂಕುಸ್ಥಾಪನೆ
ಆಂಧ್ರ ಪ್ರದೇಶ ನೂತನ ರಾಜಧಾನಿಗೆ ಚಾಲನೆ ನೀಡಿದ ಪ್ರಧಾನಿ
Published On :

ಉದ್ದಂಡರಾಯುನಿಪಲೆಮ್(ಆಂಧ್ರ ಪ್ರದೇಶ): ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಕೃಷ್ಣಾ ನದಿ ತೀರದಲ್ಲಿರುವ ಉದ್ದಂಡರಾಯುನಿಪಲೆಮ್ ಎಂಬ ಹಳ್ಳಿಯಲ್ಲಿ ನೂತನ ರಾಜಧಾನಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ಐತಿಹಾಸಿಕ ಸಮಾರಂಭಕ್ಕೆ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಸಿಂಗಾಪೂರ ಮತ್ತು ಜಪಾನ್ ದೇಶಗಳ ತಂತ್ರಜ್ಞರು, ಸಚಿವರುಗಳು, 14 ದೇಶಗಳ ರಾಯಭಾರಿಗಳು, ಕೈಗಾರಿಕೋದ್ಯಮಿಗಳು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಸಚಿವರು ಪಾಲ್ಗೊಂಡಿದ್ದರು.

ಇಂದು ಬೆಳಗ್ಗೆ ಆಂಧ್ರ ಪ್ರದೇಶಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೊದಲು ಅಮರಾವತಿ ಕ್ರೀಡಾ ಮಂಟಪ್ಪಕ್ಕೆ ಆಗಮಿಸಿದರು. ಅಲ್ಲಿ ಅಮರಾವತಿಯ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ತಿಳಿದುಕೊಂಡರು. ನಂತರ ಶುಭ ಮುಹೂರ್ತದಲ್ಲಿ ರಾಜಧಾನಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ವಿಶ್ವದಲ್ಲಿಯೇ ಅತ್ಯಂತ ಸುಂದರವಾದ ರಾಜಧಾನಿಯನ್ನು ಕೇಂದ್ರ ಸರ್ಕಾರದ ಸಹಾಯ ಮತ್ತು ಸಹಕಾರದೊಂದಿಗೆ ನಿರ್ಮಿಸಲಾಗುವುದು. ವಿದೇಶಿ ತಂತ್ರಜ್ಞರ ವಿನ್ಯಾಸಗಳನ್ನು ಕೋರಲಾಗಿದೆ. ಆಧುನಿಕ ಸೌಕರ್ಯ ಗಳೊಂದಿಗೆ ನವೀನ ರಾಜಧಾನಿಯನ್ನು ಕಟ್ಟುವುದು ನಮ್ಮ ಗುರಿ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿ, ಆಂಧ್ರ ಪ್ರದೇಶ ಇಂದು ಬಹಳ ಮುಖ್ಯವಾದ ಹೆಜ್ಜೆಯನ್ನಿಡುತ್ತಿದೆ. ನಿಜವಾದ ಅರ್ಥದಲ್ಲಿ ಅಮರಾವತಿ ಆಂಧ್ರ ಪ್ರದೇಶ ಜನರ ರಾಜಧಾನಿಯಾಗಲಿದೆ.ನಗರಗಳ ಬೆಳವಣಿಗೆಯಿಂದ ಅದೊಂದು ಅವಕಾಶ ಎಂದು ಪರಿಗಣಿಸಬೇಕೆ ಹೊರತು ಸ್ಪರ್ಧೆ ಎಂದು ತಿಳಿಯಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.