ದೇಶ

ದೇಶ ವಿಭಜನೆ ಶಕ್ತಿಗಳ ವಿರುದ್ಧ ಪ್ರೀತಿ ಗೆಲ್ಲಲಿ: ರಾಷ್ಟ್ರಪತಿಗಳ ದಸರಾ ಸಂದೇಶ

ದಸರಾ ಆಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭಾಷಯ ಕೋರಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶದ ಜನರು ಒಗ್ಗಟ್ಟಿನಿಂದ ಇರುವಂತೆ ಕರೆ ನೀಡಿದ್ದಾರೆ.

ದೇಶ ವಿಭಜನೆ ಶಕ್ತಿಗಳ ವಿರುದ್ಧ ಪ್ರೀತಿ ಗೆಲ್ಲಲಿ: ರಾಷ್ಟ್ರಪತಿಗಳ ದಸರಾ ಸಂದೇಶ
ಪ್ರಣಬ್ ಮುಖರ್ಜಿ
Published On :

ನವದೆಹಲಿ: ದಸರಾ ಆಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭಾಷಯ ಕೋರಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶದ ಜನರು ಒಗ್ಗಟ್ಟಿನಿಂದ ಇರುವಂತೆ ಕರೆ ನೀಡಿದ್ದಾರೆ.
ಸಹಾನುಭೂತಿ, ಪ್ರೀತಿ ಮತ್ತು ಸಹೋದರತ್ವ ದೇಶದ ವಿಭಜನೆಯನ್ನು ಬಯಸುವ ದುಷ್ಟ  ಶಕ್ತಿಗಳ ಮೇಲೆ ಮೇಲುಗೈ ಸಾಧಿಸುವ ಶಕ್ತಿ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಸರಾ ಹಬ್ಬ ದುಷ್ಟತೆ ವಿರುದ್ಧ  ಒಳ್ಳೆಯದರ ಗೆಲುವಿನ ಸಂಕೇತವಾಗಿದೆ. ನಾವೆಲ್ಲರೂ ದೇಶದ ಅಭಿವೃದ್ಧಿಯೆಡೆಗೆ ಒಗ್ಗಟ್ಟಿನಿಂದ ಸಾಗೋಣ, ಗೆಲುವು ಸದ್ಗುಣ, ಒಳ್ಳೆಯತನ ಮತ್ತು ಸದಾಚಾರಗಳನ್ನು ಪಾಲಿಸುವವರ ಪರವಾಗಿರಲಿದೆ ಎಂಬುದನ್ನು ದಸರಾ ಹಬ್ಬ ನೆನಪಿಸುತ್ತದೆ ಎಂದು ಪ್ರಣಬ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.   
ಅ.22 ರಂದು ದೇಶಾದ್ಯಂತ ಆಯುಧ ಪೂಜೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ದೇಶದ ಜನತೆಗೆ ಶುಭಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.