ಪಾರ್ಟಿಯಲ್ಲಿ ಇಷ್ಟದ ಹಾಡು ಕೇಳಿದ್ದಕ್ಕೆ ವಿದ್ಯಾರ್ಥಿಯ ಕೊಲೆ
ಗೆಳೆಯನೊಬ್ಬನ ಹುಟ್ಟುಹಬ್ಬ ಪಾರ್ಟಿಗೆ ಹೋಗಿ ಇಷ್ಟ ಹಾಡು ಹಾಕುವಂತೆ ಕೇಳಿದ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆಯೊಂದು ಗುರ್‌ಗಾಂವ್ ನ ಸುಭಾಷ್ ನಗರದಲ್ಲಿ ಮಂಗಳವಾರ ನಡೆದಿದೆ...

ಗುರ್‌ಗಾಂವ್: ಗೆಳೆಯನೊಬ್ಬನ ಹುಟ್ಟುಹಬ್ಬ ಪಾರ್ಟಿಗೆ ಹೋಗಿ ಇಷ್ಟ ಹಾಡು ಹಾಕುವಂತೆ ಕೇಳಿದ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆಯೊಂದು ಗುರ್‌ಗಾಂವ್ ನ ಸುಭಾಷ್ ನಗರದಲ್ಲಿ ಮಂಗಳವಾರ ನಡೆದಿದೆ.
ರೋಹಿತ್ ಭಾರದ್ವಾಜ್ (22) ಹತ್ಯೆಯಾದ ಯುವಕ. ಈತ ದೆಹಲಿಯ ಇಂದ್ರ ಪ್ರಸ್ಥ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ನೆರೆಮನೆಯ ತನ್ನ ಗೆಳಯ ಅಂಕಿತ್ ಎಂಬಾತನ ಹುಟ್ಟುಹಬ್ಬವಿದ್ದು, ಪಾರ್ಟಿಗೆ ಹೋಗುತ್ತಿದ್ದೇನೆ ಸಾಧ್ಯವಾದಷ್ಟು ಬೇಗ ಮನೆಗೆ ಬರುತ್ತೇನೆಂದು ತಂದೆ ದೀಪಕ್ ಭಾರಧ್ವಾಜ್ ಬಳಿ ಸೋಮವಾರ ರಾತ್ರಿ ಹೇಳಿಹೋಗಿದ್ದಾನೆ.
ಎಲ್ಲಾ ಪಾರ್ಟಿಯಂತೆ ಅಂಕಿತ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡು, ನೃತ್ಯಗಳು ಜೋರಾಗಿತ್ತು. ಪಾರ್ಟಿಯಲ್ಲಿ ಅಂಕಿತ್ ತನ್ನ ಸಾಕಷ್ಟು ಗೆಳೆಯರನ್ನು ಆಹ್ವಾನಿಸಿದ್ದಾನೆ. ಇದರಂತೆ ಇಷ್ಟಪಟ್ಟ ಹಾಡುಗಳನ್ನು ಹಾಕಿಲಾಗಿದೆ. ಈ ವೇಳೆ ಭಾರಧ್ವಾಜ್ ಕೂಡ ತಾನು ಇಷ್ಟಪಟ್ಟ ಹಾಡೊಂದನ್ನು ಹಾಕುವಂತೆ ಹೇಳಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಂಕಿತ್ ಇನ್ನಿತರೆ ಮೂವರು ಗೆಳೆಯರು ತಾವಿಷ್ಟಪಟ್ಟ ಹಾಡನ್ನು ಹಾಕುವಂತೆ ಸೂಚಿಸಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದದಿಂದ ಕೆಂಡಾಮಂಡಲವಾದ ಮೂವರು ಗೆಳೆಯರು ತಮ್ಮಲ್ಲಿದ್ದ ಹಾಕಿ ಸ್ಟಿಕ್ ನಿಂದ ಭಾರಧ್ವಾಜ್ ಗೆ ಮನಬಂದಂತೆ ಥಳಿಸಿದ್ದಾರೆ.
ಎಷ್ಟು ಹೊತ್ತಾದರೂ ಭಾರಧ್ವಾಜ್ ಮನೆಗೆ ಬಾರದಿರುವುದನ್ನು ಗಮನಿಸಿದ ದೀಪಕ್ ಭಾರಧ್ವಾಜ್ ಅವರು ಮಗನನ್ನು ಹುಡುಕಿಕೊಂಡು ಅಂಕಿತ್ ಮನೆಗೆ ಹೋಗಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಮಗ ಭಾರಧ್ವಾಜ್ ಗೆ ಮೂವರು ಹೊಡೆಯುತ್ತಿರುವುದನ್ನು ನೋಡಿದ್ದಾರೆ. ಆದರೆ, ಅವರನ್ನು ಪಕ್ಕಕ್ಕೆ ಎಳೆದು ಹಾಕಿದ ಮೂವರೂ ಮತ್ತೆ ಭಾರಧ್ವಾಜ್ ನನ್ನು ಎಳೆದು ಗೋಡೆಗೆ ಆತನ ತಲೆಯನ್ನು ಗುದ್ದಿದ್ದಾರೆ. ಪರಿಣಾಮ ಭಾರಧ್ವಾಜ್ ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞಾಹೀನನಾಗಿದ್ದಾನೆ.
ನಂತರ ದೀಪಕ್ ಭಾರಧ್ವಾಜ್ ಹಾಗೂ ಗೆಳಯ ಇಬ್ಬರು ಸೇರಿ ಭಾರಧ್ವಾಜ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಭಾರಧ್ವಾಜ್ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಗುರ್‌ಗಾಂವ್ ಎಸಿಪಿ ಹವಾ ಸಿಂಗ್, ಹತ್ಯೆ ಮಾಡಿದ ಮೂವರು ಗೆಳೆಯರು ಪಾರ್ಟಿಯಲ್ಲಿ ಅತಿಯಾಗಿ ಮಧ್ಯ ಸೇವಿಸಿದ್ದಾರೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡಿದ್ದ ಮೂವರು ತಮ್ಮ ಕೋಪವನ್ನು ಭಾರಧ್ವಾಜ್ ಮೇಲೆ ತೀರಿಸಿಕೊಂಡಿದ್ದಾರೆ. ಇದೀಗ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


