ಸಮುದಾಯಗಳ ನಡುವೆ ಅಸಹಿಷ್ಣುತೆ ಉದ್ಭವಿಸಲು ಬಿಡಬೇಡಿ: ದೇಶದ ಜನರಿಗೆ ರಾಜನಾಥ್ ಸಿಂಗ್ ಕರೆ
ಅಸಹಿಷ್ಣುತೆ ವಿರುದ್ಧ ಅಸಮಾಧಾನ ಹೊರಹಾಕಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಧರ್ಮದ ಹೆಸರಲಿನಲ್ಲಿ ರಾಜಕೀಯ ನಡೆಯುತ್ತಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.

ನವದೆಹಲಿ: ಅಸಹಿಷ್ಣುತೆ ವಿರುದ್ಧ ಅಸಮಾಧಾನ ಹೊರಹಾಕಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಧರ್ಮದ ಹೆಸರಲಿನಲ್ಲಿ ರಾಜಕೀಯ ನಡೆಯುತ್ತಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.
ಧರ್ಮ, ಜಾತಿಯ ಆಧಾರದಲ್ಲಿ ಯಾರನ್ನೂ ತಾರತಮ್ಯ ದೃಷ್ಟಿಯಿಂದ ನೋಡಬಾರದು, ಅಸಹಿಷ್ಣುತೆ ಬಗ್ಗೆ ಪತ್ರಿಕಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಆತಂಕ ಮೂಡಿಸುತ್ತಿವೆ. ವಸುಧೈವ ಕುಟುಂಬಕಂ ಎಂಬುದನ್ನು ಸಾರಿದ ಏಕೈಕ ದೇಶ ಭಾರತ ಎಂಬುದನ್ನು ದೇಶದ ಜನರು ನೆನಪಿನಲ್ಲಿಡಬೇಕು, ಯಾರನ್ನೂ ತಾರತಮ್ಯ ದೃಷ್ಟಿಯಿಂದ ನೋಡಬಾರದು ಎಂದು ದಸರಾ ಹಿನ್ನೆಲೆಯಲ್ಲಿ ಕರೆ ನೀಡುತ್ತಿರುವೆ ಎಂದಿದ್ದಾರೆ ರಾಜನಾಥ್ ಸಿಂಗ್. ಮುಂದಿನ ದಿನಗಳಲ್ಲಿ ಅಸಹಿಷ್ಣುತೆ ಬಗ್ಗೆ ನಮಗೆ ಯಾವುದೇ ದೂರುಗಳು ಬರಬಾರದು, ಧರ್ಮದ ಆಧಾರದಲ್ಲಿ ರಾಜಕೀಯ ನಡೆಯಬಾರದು. ಫರೀದಾಬಾದ್ ನಲ್ಲಿ ದಲಿತ ಕುಟುಂಬದ ಮೇಲೆ ನಡೆದ ಅಮಾನುಷ ಘಟನೆ ದುರದೃಷ್ಟಕರ ಹಾಗೂ ಖಂಡನೀಯ, ಘಟನೆಗಳು ನಡೆದಿರುವ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿರುವುದಾಗಿ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


