ಗಾಯಕ ಜಗಜಿತ್ ಸಿಂಗ್ ಮೇಲೆ ಪಾಕಿಸ್ತಾನ ನಡೆಸಿತ್ತ ಬೇಹುಗಾರಿಕೆ!
ಗಜಲ್ ಮಾಂತ್ರಿಕ ಜಗಜಿತ್ ಸಿಂಗ್ ಅವರ ಜೀವನಾಧಾರಿತ ಪುಸ್ತಕವೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಅದರಲ್ಲಿ ಪಾಕಿಸ್ತಾನ ಜಗಜಿತ್ ಸಿಂಗ್ ಮೇಲೆ...

ನವದೆಹಲಿ: ಗಜಲ್ ಮಾಂತ್ರಿಕ ಜಗಜಿತ್ ಸಿಂಗ್ ಅವರ ಜೀವನಾಧಾರಿತ ಪುಸ್ತಕವೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಅದರಲ್ಲಿ ಪಾಕಿಸ್ತಾನ ಗುಪ್ತಚರ ಇಲಾಖೆ ಜಗಜಿತ್ ಸಿಂಗ್ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಅಂಶ ಉಲ್ಲೇಖವಾಗಿದೆ.
ಸತ್ಯಾ ಶರಣ್ ಅವರು ಬರೆದಿರುವ ಬಾತ್ ನಿಕ್‌ಲೇಗಿ ತೊ ಫಿರ್- ದಿ ಲೈಫ್ ಆಂಡ್ ಮ್ಯೂಸಿಕ್ ಆಫ್ ಜಗಜಿತ್ ಸಿಂಗ್ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. 1979ರಲ್ಲಿ ಜಗಜಿತ್ ಸಿಂಗ್ ಪಾಕಿಸ್ತಾನದಲ್ಲಿ ತಮ್ಮ ಮೊದಲ ಕಛೇರಿ ನೀಡಿದ್ದರು. ಆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯ ಶ್ರೋತೃಗಳು ಸೇರುತ್ತಿದ್ದುದರಿಂದ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಅವರನ್ನು ಹಿಂಬಾಲಿಸಲು ಅಧಿಕಾರಿಯನ್ನು ನಿಯೋಜಿಸಿತ್ತು. ಆದರೆ, ಜಗಜಿತ್ ಗಾಯನ ಕೇಳಿದ ನಂತರ ಈ ಅಧಿಕಾರಿ ಅವರ ಅಭಿಮಾನಿಯಾಗಿ ಬದಲಾದ ಎಂದು ಹಾರ್ಪರ್‌ಕೊಲಿನ್ಸ್ ಪ್ರಕಾಶನ ಪ್ರಕಟಿಸಿದ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಒಬ್ಬ ವ್ಯಕ್ತಿ ನಮ್ಮನ್ನು ಏರ್‌ಪೋರ್ಟ್‌ನಲ್ಲಿ, ನಂತರ ಹೋಟೆಲ್‌ನಲ್ಲೂ ಹಿಂಬಾಲಿಸಿ ಬಂದ. ರೂಮಿನ ಬಾಗಿಲು ತಟ್ಟಿ ಒಳನುಸುಳಿದ. ತಾನು ಬೇಹುಗಾರ ಎಂದು ತಿಳಿಸಿ, ರೂಮಿನಲ್ಲಿ ನಡೆಯುವ ಮಾತುಕತೆ ಕದ್ದಾಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಚ್ಚರಿಸಿ, ಗುಟ್ಟಾಗಿ ಮದ್ಯದ ಬಾಟಲೊಂದನ್ನು ಉಡುಗೊರೆಯಾಗಿ ನೀಡಿದ’ ಎಂದು ಜಗಜಿತ್ ಪತ್ನಿ ಚಿತ್ರಾ ಹೇಳಿದ್ದಾಗಿ ಸತ್ಯಾ ಶರಣ್ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


