ದೇಶ

ರಾಹುಲ್ ಅವಧಿಯಲ್ಲಿ ಕೈ ಹಿರಿ ತಲೆಗಳಿಗೆ ಅವಮಾನ ಆಗಲ್ಲ: ಜೈರಾಮ್ ರಮೇಶ್

ಕಾಂಗ್ರೆಸ್‌ನಲ್ಲಿ ೬೦ ವರ್ಷ ಮೀರಿದವರು ಪಕ್ಷದ ಉನ್ನತ ಹುದ್ದೆಯಲ್ಲಿ ಇರಬಾರದು. ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡಬೇಕು...

ರಾಹುಲ್ ಅವಧಿಯಲ್ಲಿ ಕೈ ಹಿರಿ ತಲೆಗಳಿಗೆ ಅವಮಾನ ಆಗಲ್ಲ: ಜೈರಾಮ್ ರಮೇಶ್
ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ (ಸಂಗ್ರಹ ಚಿತ್ರ)
Published On :

ಹೈದರಾಬಾದ್: “ಕಾಂಗ್ರೆಸ್‌ನಲ್ಲಿ ೬೦ ವರ್ಷ ಮೀರಿದವರು ಪಕ್ಷದ ಉನ್ನತ ಹುದ್ದೆಯಲ್ಲಿ ಇರಬಾರದು. ಅವರನ್ನು ಗೌರವಪೂರ್ವಕವಾಗಿ ಬೀಳ್ಕೊಡಬೇಕು. ಆದರೆ ಪ್ರಧಾನಿ ಮೋದಿ ಬಿಜೆಪಿಯಲ್ಲಿನ  ಹಿರಿಯ ನಾಯಕರನ್ನು ಅವಮಾನಿಸಿದಂತೆ ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ಏರಿದಾಗ ಮಾಡಲಿಕ್ಕಿಲ್ಲ" ಹೀಗೆಂದು ಹೇಳಿದ್ದು ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್.

ಸಂದರ್ಶನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಮಾರ್ಚ್ ವೇಳೆಗೆ ರಾಹುಲ್ ಗಾಂಧಿ ಅಧ್ಯಕ್ಷರಾಗಲಿದ್ದಾರೆ. ಈ ವೇಳೆಗೆ ಪಕ್ಷದಲ್ಲಿ ಅಧಿಕಾರದ ಹಸ್ತಾಂತರ ಹಿರಿಯರಿಂದ ಯುವ ನಾಯಕತ್ವಕ್ಕೆ ಸಮಸ್ಯೆ ಇಲ್ಲದೆ ನಡೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾದರೆ ರಕ್ತಕ್ರಾಂತಿ ಏನೂ ಆಗದು ಎಂದು ಅವರು ಹೇಳಿದ್ದಾರೆ.

ರಾಹುಲ್ ಮಾತ್ರ ಉನ್ನತ ಹುದ್ದೆಗೆ ಏರುವುದಲ್ಲ. ಅವರ ಜತೆ ಯುವಕರ ಪಡೆಯೇ ಪಕ್ಷದ ಚುಕ್ಕಾಣಿ ಹಿಡಿಯಲಿದೆ ಎಂದಿದ್ದಾರೆ ಜೈರಾಮ್ ರಮೇಶ್. ಸದ್ಯ ಕಾಂಗ್ರೆಸ್ ಉಪಾಧ್ಯಕ್ಷ  ಜನರ ನಾಡಿಮಿಡಿತ ಅರಿಯುತ್ತಿದ್ದಾರೆ. ಅದನ್ನು ಅರಿಯದ ಹೊರತಾಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಜೈರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜೀವ್ ಗಾಂಧಿ ೧೯೮೪ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಆರಂಭದಲ್ಲಿ ಯಾವ ರೀತಿಯ ಬದಲಾವಣೆ ಆಗಿತ್ತೋ ಅದೇ ರೀತಿ ರಾಹುಲ್ ಅಧಿಕಾಕ್ಕೇರಿದಾಗ ಬದಲಾವಣೆ ಸಾಧ್ಯವಿದೆ ಎಂದು ಅವರು  ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.