ಲಾಲುಗೆ ನಿತೀಶ್ ಬರೆದಿದ್ದ ಪತ್ರ ಬಹಿರಂಗ
ಬಿಹಾರ ವಿಧಾನಸಭೆ ಚುನಾವಣೆಯ ಉಳಿದ ೩ ಹಂತ ಗಳು ಬಾಕಿಯಿರುವಾಗಲೇ ಮಹಾಮೈತ್ರಿಯಲ್ಲಿ ಹುಳಿಹಿಂಡಲು ಬಿಜೆಪಿ ಸಿದ್ಧತೆ ನಡೆಸಿದೆ. ಅದರ ಮೊದಲ ಪ್ರಯತ್ನವಾಗಿ, ೨೩ ವರ್ಷಗಳ ಹಿಂದೆ ಲಾಲು..

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಉಳಿದ ೩ ಹಂತ ಗಳು ಬಾಕಿಯಿರುವಾಗಲೇ ಮಹಾಮೈತ್ರಿಯಲ್ಲಿ ಹುಳಿಹಿಂಡಲು ಬಿಜೆಪಿ ಸಿದ್ಧತೆ ನಡೆಸಿದೆ. ಅದರ ಮೊದಲ ಪ್ರಯತ್ನವಾಗಿ, ೨೩ ವರ್ಷಗಳ ಹಿಂದೆ ಲಾಲು ಪ್ರಸಾದ್ ರ ದುರಾಡಳಿತವನ್ನು ಖಂಡಿಸಿ ಸ್ವತಃ ನಿತೀಶ್ ಅವರು ಲಾಲುಗೆ ಬರೆದಿದ್ದ ಪತ್ರ ಬಿಜೆಪಿ ಬಿಡುಗಡೆ ಮಾಡಿದೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಅವರು ಸಿಎಂ ಆಗಿದ್ದಾಗ ನಿತೀಶ್ ಬರೆದಿದ್ದ ಪತ್ರದ ಕೆಲವೊಂದು ಅಂಶಗಳನ್ನು ಎತ್ತಿ, ಬಿಜೆಪಿಯು ಸ್ಥಳೀಯ ಪತ್ರಿಕೆಗಳಲ್ಲಿ ತಲಾ ಒಂದೊಂದು ಪುಟಗಳ ಜಾಹೀರಾತು ನೀಡಿದೆ.
ಪತ್ರದಲ್ಲೇನಿತ್ತು?: ೧೯೯೨ರಲ್ಲಿ ಬರೆದ ಪತ್ರದಲ್ಲಿ ನಿತೀಶ್ ಅವರು, ‘ಲಾಲು, ಸಾಮಾಜಿಕ ನ್ಯಾಯ ಎಂಬ ಅಜೆಂಡಾವನ್ನೇ ತ್ಯಾಗ ಮಾಡಿ, ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸರ ನೇಮಕದ ವೇಳೆ ಭಾರಿ ಅಕ್ರಮ ನಡೆದಿದೆ. ಎಲ್ಲ ಹುದ್ದೆಗಳನ್ನೂ ಪ್ರಭಾವಿ ಜಾತಿಯೊಂದಕ್ಕೆ ಮೀಸಲಿಟ್ಟಂತೆ ಕಾಣುತ್ತಿದೆ’ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


