ಬಂಗಾಳ ಕೊಲ್ಲಿಯಲ್ಲಿ ಅಮೇರಿಕ, ಭಾರತ, ಜಪಾನ್ ಜಂಟಿ ಸೇನಾ ಕಾರ್ಯಾಚರಣೆಗೆ ಚೀನಾ ಆಕ್ಷೇಪ
ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೇರಿಕಾ, ಜಪಾನ್ ರಾಷ್ಟ್ರಗಳು ಜಂಟಿ ಸೇನಾ ಕಾರ್ಯಾಚರಣೆ(ತಾಲೀಮು) ನಡೆಸುತ್ತಿರುವುದರ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೇರಿಕಾ, ಜಪಾನ್ ರಾಷ್ಟ್ರಗಳು ಜಂಟಿ ಸೇನಾ ಕಾರ್ಯಾಚರಣೆ(ತಾಲೀಮು) ನಡೆಸುತ್ತಿರುವುದರ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ ಪೂರ್ವ ತೀರದಲ್ಲಿ ಜಪಾನ್ ಅಮೆರಿಕದೊಂದಿಗೆ ಭಾರತ ನೌಕಾ ಕಾರ್ಯಾಚರಣೆ ನಡೆಸುತ್ತಿರುವುದು ಮೂರು ರಾಷ್ಟ್ರಗಳ ಆಯಕಟ್ಟಿನ ಸಂಬಂಧಗಳು ಬಲಗೊಳ್ಳುತ್ತಿರುವುದರ ಸೂಚನೆ ಎಂದೇ ವಿಶ್ಲೇಷಿಸಲಾಗಿದೆ. ಸೋಮವಾರದವರೆಗೆ ಕಾರ್ಯಾಚರಣೆ ನಡೆಯಲಿದ್ದು ಅಮೇರಿಕಾ ಕ್ಷಿಪಣಿ ಕ್ರೂಸರ್ ಮತ್ತು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯುಎಸ್ಎಸ್ ಥಿಯೋಡರ್ ರೂಸ್ವೆಲ್ಟ್ ನ್ನು ನಿಯೋಜಿಸಿದೆ.
ಭಾರತ- ಜಪಾನ್ ರಾಷ್ಟ್ರಗಳು ಅಮೆರಿಕಾಗೆ ರಕ್ಷಣಾ ಕ್ಷೇತ್ರದ ಅದ್ಭುತ ಪಾಲುದಾರರು ಎಂದು ಯುಎಸ್ಎಸ್ ಥಿಯೋಡರ್ ರೂಸ್ವೆಲ್ಟ್ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಕ್ರೇಗ್ ಕ್ಲಾಪ್ಪರ್ಟನ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಚೀನಾ ಸರ್ಕಾರಿ ಪತ್ರಿಕೆ ಪ್ರತಿಕ್ರಿಯಿಸಿದ್ದು, ಭಾರತ ಚೀನಾ ವಿರೋಧಿ ರಾಷ್ಟ್ರಗಳ ಮೈತ್ರಿಗೆ ಒಳಗಾಗಬಾರದೆಂದು ಎಚ್ಚರಿಕೆ ನೀಡಿದೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದೆ. ಉತ್ತಮ ದ್ವಿಪಕ್ಷೀಯ ಸಂಬಂಧ ಮುಂದುವರೆಯುವುದು ಉಭಯ ರಾಷ್ಟ್ರಗಳಿಗೂ ಒಳಿತು ಭಾರತವನ್ನು ಚೀನಾ ವಿರೋಧಿ ಮೈತ್ರಿಗೆ ಎಳೆಯುವ ಶಕ್ತಿಗಳ ಬಗ್ಗೆ ಭಾರತ ಎಚ್ಚರವಾಗಿರಬೇಕು ಎಂದು ಗ್ಲೋಬಲ್ ಟೈಮ್ಸ್ ಬರೆದಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಜಪಾನ್, ಚೀನಾ ನಡುವೆ ವಿವಾದ ಇದ್ದು, ಭಾರತದ ಪೂರ್ವ ತೀರದಲ್ಲಿ ಅಮೆರಿಕಾ ಭಾರತದೊಂದಿಗೆ ಜಪಾನ್ ನೌಕಾ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


