ದೇಶ

ನಹಾಮ್ ನಲ್ಲಿ ಗೋ ಕಳ್ಳಸಾಗಣೆದಾರನ ಹತ್ಯೆ: ಓರ್ವನ ಸೆರೆ

ಹಿಮಾಚಲದ ಸಿರಮೌರ್‌ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಡಿದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು...

ನಹಾಮ್ ನಲ್ಲಿ ಗೋ ಕಳ್ಳಸಾಗಣೆದಾರನ ಹತ್ಯೆ: ಓರ್ವನ ಸೆರೆ
ಗೋ ಕಳ್ಳಸಾಗಣೆ
Published On :
ನಹಾಮ್: ಹಿಮಾಚಲದ ಸಿರಮೌರ್‌ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಡಿದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. 
ಲಾರಿಯಲ್ಲಿ ಗೋವುಗಳ ಕಳ್ಳಸಾಗಣೆ ವೇಳೆ ಕಳ್ಳಸಾಗಣೆಯನ್ನು ತಡೆಯಲು ಉದ್ರಿಕ್ತರ ಗುಂಪು ಸುಮೋ ವಾಹನವನ್ನು ಬಳಸಿತ್ತು. ಈ ವಾಹನ ಚಾಲಕನನ್ನು ಸದ್ಯ ಬಂಧಿಸಲಾಗಿದ್ದು, ಕೆಲ ದಿನಗಳಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಹಾನ್ ನ ಪೊಲೀಸ್ ಅಧೀಕ್ಷಕ ಸೌಮ್ಯ ಸಾಂಬಶಿವನ್ ಹೇಳಿದ್ದಾರೆ. 
ಹತ್ಯೆಗೀಡಾದ ವ್ಯಕ್ತಿ ಸೇರಿ ನಾಲ್ವರು ಕಳೆದ ಬುಧವಾರ ಲಾರಿಯೊಂದರಲ್ಲಿ 10 ದನ ಮತ್ತು 5 ಆಕಳನ್ನು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಜನರು ಟ್ರಕ್‌ ಮೇಲೆ ದಾಳಿ ಮಾಡಿದ್ದಾರೆ. ಆಗ ಹೆದರಿದ ಲಾರಿಯಲ್ಲಿದ್ದ ವ್ಯಕ್ತಿಗಳು ಕೆಲ ಆಕಳನ್ನು ಟ್ರಕ್‌ನಿಂದ ಕೆಳಗೆ ನೂಕಿದ್ದಾರೆ. ಆಗ ಒಂದು ಗೋವು ಸತ್ತುಹೋಗಿದೆ. ಇನ್ನು 5 ಗೋವುಗಳು ಗಾಯಗೊಂಡಿವೆ. ಅನಂತರ ಗೋಕಳ್ಳರು ಸ್ಥಳವೊಂದರಲ್ಲಿ ಅವಿತಿದ್ದಾಗ, ಜನರು ಇವರನ್ನು ಬೆನ್ನಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಜನರಿಂದ ಥಳಿತಕ್ಕೊಳಗಾಗಿದ್ದ ಉತ್ತರಪ್ರದೇಶದ ಸಹಾರನ್‌ಪುರದ ನೋಮಾನ್‌ (28) ಎಂಬಾತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.