ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡಿದ ಒಡಿಶಾ ಸರ್ಕಾರ
ಒಡಿಶಾ ಸರ್ಕಾರ ತನ್ನ ನೌಕರರಿಗೆ ದಸರಾ ಗಿಫ್ಟ್ ನೀಡಿದ್ದು ಡಿಎ(ತುಟ್ಟಿಭತ್ಯ)ಯನ್ನು ಶೇ.6 ರಷ್ಟು ಏರಿಕೆ ಮಾಡಿದೆ.

ಭುವನೇಶ್ವರ್: ಒಡಿಶಾ ಸರ್ಕಾರ ತನ್ನ ನೌಕರರಿಗೆ ದಸರಾ ಗಿಫ್ಟ್ ನೀಡಿದ್ದು ಡಿಎ(ತುಟ್ಟಿಭತ್ಯೆ)ಯನ್ನು ಶೇ.6 ರಷ್ಟು ಏರಿಕೆ ಮಾಡಿದೆ.
ಸುಮಾರು 4 ಲಕ್ಷ ಸರ್ಕಾರಿ ನೌಕರರು ಡಿಎ ಏರಿಕೆಯ ಫಲಾನುಭವಿಗಳಾಗಲಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಏರಿಕೆ ಮಾಡಿರುವುದರಿಂದ ಶೇ.113 ರಷ್ಟಿದ್ದ ಡಿಎ ಈಗ ಶೇ.119 ರಷ್ಟಾಗಿದೆ.
ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರಿಗೂ ಡಿಎ ಏರಿಕೆ ಅನ್ವಯವಾಗಲಿದೆ. ಅಕ್ಟೋಬರ್ ನ ವೇತನದಲ್ಲೇ ಡಿಎ ಏರಿಕೆಯ ಹಣವನ್ನು ಪಡೆಯಲಿದ್ದಾರೆ ಎಂದು ಸರ್ಕಾರಿ ಆದೇಶ ತಿಳಿಸಿದೆ. ತುಟ್ಟಿಭತ್ಯೆ ಏರಿಕೆ ಮಾಡಿರುವುದರಿಂದ ಸರ್ಕಾರಕ್ಕೆ 305 ಕೋಟಿ ರೂಪಾಯಿ ಹೆಚ್ಚಿನ ಹೊರೆ ಬಿಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


