ಲೈಂಗಿಕ ಅಲ್ಪಸಂಖ್ಯಾತರ ರೂಪದ ದುರ್ಗಾದೇವಿ: ಕೊಲ್ಕೊತದಲ್ಲಿ ವಿಶೇಷ ಮೂರ್ತಿ
ದಸರಾ ಹಬ್ಬದ ಪ್ರಮುಖ ವಿಶೇಷತೆ ದುರ್ಗಾ ಪೂಜೆ. ದೇಶಾದ್ಯಂತ ನಾನಾ ರೂಪದಲ್ಲಿ ದುರ್ಗಾದೇವಿ ಮೂರ್ತಿ ಸೃಷ್ಟಿಸಲಾಗುತ್ತದೆ...

ಕೊಲ್ಕೊತಾ: ದಸರಾ ಹಬ್ಬದ ಪ್ರಮುಖ ವಿಶೇಷತೆ ದುರ್ಗಾ ಪೂಜೆ. ದೇಶಾದ್ಯಂತ ನಾನಾ ರೂಪದಲ್ಲಿ ದುರ್ಗಾದೇವಿ ಮೂರ್ತಿ ಸೃಷ್ಟಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಈ ಭಾರಿ ದುರ್ಗಾದೇವಿ ಮೂರ್ತಿಎಲ್ಲರ ಗಮನ ಸೆಳೆಯುತ್ತಿದೆ.
ವಿಭಿನ್ನ ಶೈಲಿಯ ದುರ್ಗಾದೇವಿ ವಿಗ್ರಹಗಳ ತಯಾರಿಕೆಯಲ್ಲಿ ಕೊಲ್ಕೊತಾ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಕೊಲ್ಕತ್ತಾದ ಜಾಯ್ ಮಿತ್ರಾ ಸ್ಟ್ರೀಟ್ ನಲ್ಲಿ ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ಲೈಂಗಿಕ ಅಲ್ಪಸಂಖ್ಯಾತರ ರೂಪದಲ್ಲಿ ದುರ್ಗಾ ದೇವಿ ಮೂರ್ತಿಯನ್ನು ತಯಾರು ಮಾಡಿದ್ದಾರೆ. ಇದು ಭಾರತದ ಮೊದಲ ವಿಶೇಷ ದುರ್ಗಾದೇವಿ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊಲ್ಕೊತಾದ ಹಲವಾರು ಲೈಂಗಿಕ ಅಲ್ಪಸಂಖ್ಯಾತರು ಸೇರಿ ದುರ್ಗಾದೇವಿಗೆ ತಮ್ಮದೇ ರೂಪ ಕೊಟ್ಟು ದೇವಿಯ ಮೂರ್ತಿಯಲ್ಲಿ ತಮ್ಮನ್ನು ಕಂಡುಕೊಂಡಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತಾಗಿ 'ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಪೂರ್ವಾಗ್ರಹಗಳು ಬೆಳೆದಿದೆ. ಇದನ್ನುಹೋಗಲಾಡಿಸುವ ಪಣತೊಟ್ಟ ನಾವು ದುರ್ಗಾದೇವಿಗೆ ಈ ರೀತಿ ರೂಪ ಕೊಟ್ಟಿದ್ದೇವೆ.
ಜನರಲ್ಲಿ ತೃತೀಯ ಲಿಂಗಿಗಳ ಬಗ್ಗೆ ಬೆಳೆದಿರುವ ತಾತ್ಸಾರ ಮನೋಭಾವವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದೇವೆ' ಎಂದು ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ಹೇಳುತ್ತಾರೆ. ಇನ್ನು ದುರ್ಗಾ ಪೂಜೆ ಆಚರಣೆಗೆ ಹಣಕ್ಕಾಗಿ ಫೇಸ್ ಬುಕ್ ನಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


