ಮೋದಿ ರ್ಯಾಲಿ ರದ್ದಿನ ಹಿಂದೆ ಬಿಹಾರ ಬಿಜೆಪಿ ನಾಯಕರ ಕೈವಾಡ: ಶತ್ರುಘ್ನ ಸಿನ್ಹಾ
ಬಿಹಾರ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರ್ಯಾಲಿ ರದ್ದು ಮಾಡುವುದರ ಹಿಂದೆ ಬಿಹಾರ ಬಿಜೆಪಿ ನಾಯಕರ ಕೈವಾಡವಿದೆ ಎಂದು ಹಿರಿಯ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಅವರು ಶನಿವಾರ ಹೇಳಿದ್ದಾರೆ...

ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರ್ಯಾಲಿ ರದ್ದು ಮಾಡುವುದರ ಹಿಂದೆ ಬಿಹಾರ ಬಿಜೆಪಿ ನಾಯಕರ ಕೈವಾಡವಿದೆ ಎಂದು ಹಿರಿಯ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈ ವೇಳೆ ಬಿಹಾರ ಬಿಜೆಪಿ ನಾಯಕರಿಂದ ಮೋದಿಯವರ ರ್ಯಾಲಿ ರದ್ದಾಯಿತು. ಕೊನೆ ಕ್ಷಣದಲ್ಲಿ ಮೋದಿಯವರ ರ್ಯಾಲಿಯನ್ನು ರದ್ದು ಮಾಡುವುದು ಒಳ್ಳೆಯದಲ್ಲ. ಇದು ಜನರಿಗೆ ಋಣಾತ್ಮಕ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದ್ದಾರೆ.
ಬಿಹಾರ ಚುನಾವಣೆ ಸಂದರ್ಭದಲ್ಲಿ ಅನಪೇಕ್ಷಿತ ಪರಿಸ್ಥಿತಿ ಹಾಗೂ ಅವ್ಯವಸ್ಥೆ ಸೃಷ್ಟಿಯಾಗಲು ಅಲ್ಲಿನ ಸ್ಥಳೀಯ ಸರ್ವಾಧೀಕಾರದ ನಾಯಕರೇ ಜವಾಬ್ದಾರಿಯುತರಾಗಿದ್ದಾರೆ. ಚುನಾವಣೆಯಲ್ಲಿ ಸಂದರ್ಭದಲ್ಲಿ ಸೃಷ್ಟಿಯಾದ ಕೆಲವು ಸಮಸ್ಯೆಗಳನ್ನು ಬಿಟ್ಟರೆ ಚುನಾವಣೆ ಸಂದರ್ಭದಲ್ಲಿ ಯಾವುದೆಲ್ಲಾ ಮಾಡಬೇಕೆಂದು ಪಕ್ಷ ಆಲೋಚನೆ ಮಾಡಿತ್ತೊ ಆ ಎಲ್ಲಾ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬಿಹಾರ ಚುನಾವಣೆ ನಿಮಿತ್ತ ಮೋದಿಯವರು ಅಕ್ಟೋಬರ್ 16 ರಂದು ವೈಶಾಲಿ ಮತ್ತು ಬುಕ್ಲಾರ್ ಜಿಲ್ಲೆಗಳಲ್ಲಿ ರ್ಯಾಲಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ರ್ಯಾಲಿಯನ್ನು ಕಾರಣಾಂತರಗಳಿಂದ ರದ್ದು ಮಾಡಲಾಗಿತ್ತು. ಇದೇ ರೀತಿಯಲ್ಲಿಯೇ ಅ.20 ರಂದು ನಡೆಯಬೇಕಿದ್ದ ರ್ಯಾಲಿಯನ್ನು ರದ್ದು ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


