ದೇಶ

ಫೇಸ್‍ಬುಕ್ ವಾಟ್ಸಾಪ್ ಇಲ್ಲದ ಬದುಕೇಕೆ ಎಂದು ಸತ್ತೇ ಹೋದಳು

ಸಂಪರ್ಕ ಏರ್ಪಡಲೆಂದು ಕಂಡುಹಿಡಿದ ಮೊಬೈಲ್ ಮತ್ತು ಫೇಸ್‍ಬುಕ್, ವಾಟ್ಸಾಪ್ ಗಳು ಸಂಪರ್ಕ ಕಟ್ ಮಾಡಲು ಕಾರಣವಾಗಿವೆ. ಡಿವೋರ್ಸುಗಳು...

ಫೇಸ್‍ಬುಕ್ ವಾಟ್ಸಾಪ್ ಇಲ್ಲದ ಬದುಕೇಕೆ ಎಂದು ಸತ್ತೇ ಹೋದಳು
ಸಾಂದರ್ಭಿಕ ಚಿತ್ರ
Published On :
ಕೊಯಮತ್ತೂರು: ಸಂಪರ್ಕ ಏರ್ಪಡಲೆಂದು ಕಂಡುಹಿಡಿದ ಮೊಬೈಲ್  ಮತ್ತು ಫೇಸ್‍ಬುಕ್, ವಾಟ್ಸಾಪ್  ಗಳು ಸಂಪರ್ಕ ಕಟ್ ಮಾಡಲು ಕಾರಣವಾಗಿವೆ. ಡಿವೋರ್ಸುಗಳು, ಬ್ರೇಕ್‍ಅಪ್‍ಗಳು, ಸ್ನೇಹಿತರ ನಡುವೆ ಜಗಳ, ಗುಂಪುಗಾರಿಕೆ ಎಲ್ಲವನ್ನೂ ಹುಟ್ಟುಹಾಕಿದ ಸಾಮಾಜಿಕ ಜಾಲತಾಣದ ಅತಿರೇಕಗಳು ಇದೀಗ ಸಾವಿಗೂ ಮುನ್ನುಡಿ ಬರೆಯಲಾರಂಭಿಸಿವೆ. ಫೇಸ್ ಬುಕ್, ವಾಟ್ಸಾಪ್  ಅಡಿಕ್ಷನ್ ಇದೀಗ ಕೇರಳದ ನವವಿವಾಹಿತೆಯೊಬ್ಬಳನ್ನು ಬಲಿ ತೆಗೆದುಕೊಂಡಿದೆ. 20ರ ಹರೆಯದ ಅಪರ್ಣಾ ಎಂಬಾಕೆ ದಿನದ ಮೂರೂ ಹೊತ್ತೂ ಮೊಬೈಲಿ ಫೋನ್ನಲ್ಲಿ   ತಲೀನಳಾಗಿರುತ್ತಿದ್ದಳೆಂದು ಆಕೆಯ ಪತಿಗೆ ಕಿರಿಕಿರಿ. ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಮದುವೆಯಾದ ಹೊಸತರಲ್ಲೇ ಈ ರೀತಿ ವರ್ತನೆ ಕಂಡು ಬೇಸತ್ತ ಪತಿ ಗದರಿಸಿದ್ದಾನೆ. ಲಾರಿ ಡ್ರೈವರ್ ಪತಿ ಕುಮಾರ್ ಈ ಫೇಸ್‍ಬುಕ್ ಚಟ ಬಿಡಿಸಲೇಬೇಕೆಂದು ಅಂದು ಆಕೆಗೆ ಸರಿಯಾಗಿ ಬಯ್ದು, ಆಕೆಯ ಮೊಬೈಲ್ ಕಿತ್ತುಕೊಂಡು ತನ್ನೊಂದಿಗೆ ಒಯ್ದಿದ್ದಾನೆ. ಇದರಿಂದ ತೀವ್ರವಾಗಿ ನೊಂದ ಅಪರ್ಣಾ ತನ್ನ ಇನ್ನೊಂದು ಫೋನ್‍ನಿಂದ ಅಣ್ಣನಿಗೆ ಕರೆಮಾಡಿ ತನ್ನ ಬೇಸರ ಹೇಳಿಕೊಂಡು ಆತನ ಸಮಾಧಾನದ ನುಡಿಗೂ ಕಾಯದೆ, ಮನೆಯ ಬಾಗಿಲು ಹಾಕಿ, ದುಪ್ಪಟ್ಟಾದಿಂದಲೇ ನೇಣು-
ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಇದರ ಬೆನ್ನಲ್ಲೇ ಗಂಡ ಕೂಡ ಕಟ್ಟಡದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.