ದೇಶ

ಕುಟುಂಬದವರನ್ನು ಗುರುತಿಸಿದ ಗೀತಾ, ಸದ್ಯದಲ್ಲಿಯೇ ಸ್ವದೇಶಕ್ಕೆ: ಸುಷ್ಮಾ ಸ್ವರಾಜ್

13 ವರ್ಷಗಳ ಹಿಂದೆ ಪಾಕಿಸ್ತಾನ ಪ್ರಾಂತ್ಯವನ್ನು ಆಕಸ್ಮಿಕವಾಗಿ ತಪ್ಪಾಗಿ ಪ್ರವೇಶಿಸಿದ್ದ ಭಾರತೀಯ ಯುವತಿ ಗೀತಾಳ ಪೋಷಕರನ್ನು...

ಕುಟುಂಬದವರನ್ನು ಗುರುತಿಸಿದ ಗೀತಾ, ಸದ್ಯದಲ್ಲಿಯೇ ಸ್ವದೇಶಕ್ಕೆ: ಸುಷ್ಮಾ ಸ್ವರಾಜ್
ಪಾಕಿಸ್ತಾನದಲ್ಲಿರುವ ಬಿಹಾರ ಮೂಲದ ಯುವತಿ ಗೀತಾ
Published On :

ಇಸ್ಲಾಮಾಬಾದ್/ನವದೆಹಲಿ: 13 ವರ್ಷಗಳ ಹಿಂದೆ ಪಾಕಿಸ್ತಾನ ಪ್ರಾಂತ್ಯವನ್ನು ಆಕಸ್ಮಿಕವಾಗಿ ತಪ್ಪಾಗಿ ಪ್ರವೇಶಿಸಿದ್ದ ಭಾರತೀಯ ಯುವತಿ ಗೀತಾಳ ಪೋಷಕರನ್ನು ಭಾರತ ಸರ್ಕಾರ ಪತ್ತೆಹಚ್ಚಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಕಿವುಡಿ ಮತ್ತು ಮೂಗಿಯಾಗಿರುವ ಗೀತಾಳ ಪೋಷಕರು ಬಿಹಾರದಲ್ಲಿದ್ದಾರೆ. ಅವಳು ಸದ್ಯದಲ್ಲಿಯೇ ಭಾರತಕ್ಕೆ ಹಿಂತಿರುಗಲಿದ್ದಾಳೆ. ಅವಳನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ಒಪ್ಪಿಸಲಾಗುವುದು ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಲಾಭರಹಿತ ಸಾಮಾಜಿಕ ಕಾರ್ಯ ಸಂಸ್ಥೆಯಾದ ಈದಿಯ ವಕ್ತಾರ ಅನ್ವರ್ ಕಜ್ಮಿ ಮಾಧ್ಯಮದೊಂದಿಗೆ ಮಾತನಾಡಿ, ಇಸ್ಲಾಮಾಬಾದ್ ನಲ್ಲಿರುವ ಭಾರತದ ಉನ್ನತ ಆಯೋಗದ ಮೂಲಕ ಗೀತಾಳ ಕುಟುಂಬದವರ ಫೋಟೋಗಳನ್ನು ಕಳುಹಿಸಿಕೊಡಲಾಯಿತು. ಫೋಟೋ ನೋಡಿದ ತಕ್ಷಣ ಗೀತಾ ತನ್ನ ಸಹೋದರ-ಸಹೋದರಿಯರನ್ನು ಗುರುತು ಹಿಡಿದಿದ್ದಾಳೆ. ಅವಳ ಕುಟುಂಬದವರು ಬಿಹಾರದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ.

ಬಾಲಿವುಡ್ ನಲ್ಲಿ ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ಚಿತ್ರದ ಕಥೆಗೂ ಗೀತಾಳ ನಿಜ ಜೀವನಕ್ಕೂ ಹೋಲಿಕೆಯಿರುವುದರಿಂದ ಚಿತ್ರ ಬಿಡುಗಡೆಯಾದ ಬಳಿಕ ಆಕೆ ಜನಪ್ರಿಯಳಾದಳು.

ಗೀತಾಳಿಗೆ ಈಗ 21 ವರ್ಷ. 13 ವರ್ಷಗಳ ಹಿಂದೆ ದಾರಿತಪ್ಪಿ ವಾಘಾ ಗಡಿ ದಾಟಿ ಹೋಗಿ ಲಾಹೋರ್ ನಲ್ಲಿ ಸಮ್ಜೌತ ಎಕ್ಸ್ ಪ್ರೆಸ್ ನಲ್ಲಿ ಒಬ್ಬಳೇ ಕುಳಿತಿದ್ದ ಗೀತಾಳನ್ನು ಪಾಕಿಸ್ತಾನಿ ಸೇನೆ ಪತ್ತೆಹಚ್ಚಿ  ಈದಿ ಫೌಂಡೇಷನ್ ಗೆ ಕಳುಹಿಸಿತ್ತು. ಈ ಸಂಸ್ಥೆಯ ಆಶ್ರಯದಲ್ಲಿಯೇ ಗೀತಾ ಇಷ್ಟು ವರ್ಷಗಳ ಕಾಲ ಇದ್ದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.