ಮುಸಲ್ಮಾನರಿಗೆ ನಮಾಜ್ ಮಾಡಲು ಅಂಗಡಿ ಕೊಟ್ಟ ಹಿಂದೂ ವ್ಯಾಪಾರಿ
ಹಿಂದೂ ವ್ಯಾಪಾರಿಯೊಬ್ಬರು ಮುಸಲ್ಮಾನರಿಗೆ ನಮಾಜ್ ಮಾಡಲು ತನ್ನ ಅಂಗಡಿಯಲ್ಲಿ ಸ್ಥಳ ನೀಡಿ ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ...

ಮುಂಬಯಿ: ದಾದ್ರಿ ಪ್ರಕರಣದಿಂದ ಇಡೀ ಉತ್ತರ ಪ್ರದೇಶ ಹೊತ್ತಿ ಉರಿಯುತ್ತಿದೆ. ಜೊತೆಗೆ ಹಿಂದೂ ಮುಸ್ಲಿಮರಲ್ಲಿ ದ್ವೇಷದ ಕಿಡಿ ಹೊತ್ತಿಸುತ್ತಿದೆ. ಇದರ ಬೆನ್ನಲ್ಲೇ ಮುಂಬಯಿಯಲ್ಲಿ ಹಿಂದೂ ವ್ಯಾಪಾರಿಯೊಬ್ಬರು ಮುಸಲ್ಮಾನರಿಗೆ ನಮಾಜ್ ಮಾಡಲು ತನ್ನ ಅಂಗಡಿಯಲ್ಲಿ ಸ್ಥಳ ನೀಡಿ ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಮುಂಬಯಿಯ ಮುಕುಂದ ನಗರದಲ್ಲಿದ್ದ ಮಸೀದಿಯನ್ನು ಪುನರ್ ಅಭಿವೃದ್ಧಿಗಾಗಿ ಕೆಡವಲಾಗಿತ್ತು. ಇದರಿಂದ ಅಲ್ಲಿದ್ದ ಮುಸ್ಲಿಮರು ಒಟ್ಟಾಗಿ ನಮಾಜ್ ಮಾಡಲು ಜಾಗದ ಸಮಸ್ಯೆ ಉಂಟಾಯಿತು.
ಮುಕುಂದ ನಗರದಲ್ಲಿದ್ದ ಮಸೀದಿ ಎದುರಿದ್ದ ಲೆದರ್ ವ್ಯಾಪಾರಿ ದಿಲೀಪ್ ಕಾಳೆ ಅವರ ಬಳಿ ಬಂದ ಕೆಲ ಮುಸ್ಲಿಮರು ತಮ್ಮ ಅಂಗಡಿಯಲ್ಲಿ ನಮಾಜ್ ಮಾಡಲು ಸ್ಥಳ ನೀಡುವಂತೆ ಮನವಿ ಮಾಡಿದರು. ಯಾವುದೇ ರೀತಿ ಹಿಂಜರಿಯದೇ ದಿಲೀಪ್ ಕಾಳೆ ತಮ್ಮ ಅಂಗಡಿಯ 2.500 ಚದರ ಅಡಿ ಜಾಗವನ್ನು ನಮಾಜ್ ಗಾಗಿ ಬಿಟ್ಟುಕೊಟ್ಟಿದ್ದಾರೆ.
40 ವರ್ಷದಿಂದ ಇದೇ ಪ್ರದೇಶದಲ್ಲಿ ದಿಲೀಪ್ ಕಾಳೆ ವಾಸಿಸುತ್ತಿದ್ದಾರೆ. ಅಂದಿನಿಂದ ಇಂದಿನವರಗೂ ಯಾವುದೇ ಮನಸ್ತಾಪಗಳಿಲ್ಲದೇ ಬದುಕುತ್ತಿದ್ದೇವೆ. ಅವರು ಬಂದು ನಮಾಜ್ ಮಾಡಲು ಬಂದು ಸ್ಥಳ ಕೇಳಿದಾಗ ನಾನು ಸಂತೋಷದಿಂದ ಒಪ್ಪಿದ್ದೇನೆ.ಇವರೆಲ್ಲರೂ ನನ್ನ ಜನ ಎಂದು ದಿಲೀಪ್ ಕಾಳೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


