ದೇಶ

"ಖವ್ವಾಲಿ ಶೆಹನ್ ಷಾ" ಫತೇಹ್ ಅಲಿಖಾನ್ ಗೆ ಗೂಗಲ್-ಡೂಡಲ್ ಗೌರವ

ಖವ್ವಾಲಿ ಸಂಗೀತದ ಅನಿಭಿಶಕ್ತ ದೊರೆ ಪಾಕ್ ಗಾಯಕ ಫರ್ವೇಜ್ ಫತೇಹ್ ಅಲಿಖಾನ್ ಅವರ 67ನೇ ಜನ್ಮ ದಿನಾಚರಣೆಯ ನಿಮಿತ್ತ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ಡೂಡಲ್ ಮಾಡುವ ಮೂಲಕ ಗೌರವ ಸಲ್ಲಿಸಿದೆ...

"ಖವ್ವಾಲಿ ಶೆಹನ್ ಷಾ" ಫತೇಹ್ ಅಲಿಖಾನ್ ಗೆ ಗೂಗಲ್-ಡೂಡಲ್ ಗೌರವ
ಫರ್ವೇಜ್ ಫತೇಹ್ ಅಲಿಖಾನ್
Published On :

ನವದೆಹಲಿ: ಖವ್ವಾಲಿ ಸಂಗೀತದ ಅನಿಭಿಶಕ್ತ ದೊರೆ ಪಾಕ್ ಗಾಯಕ ಫರ್ವೇಜ್ ಫತೇಹ್ ಅಲಿಖಾನ್ ಅವರ 67ನೇ ಜನ್ಮ ದಿನಾಚರಣೆಯ ನಿಮಿತ್ತ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ  ಡೂಡಲ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.

ಅಕ್ಟೋಬರ್ 13 1948ರಲ್ಲಿ ಜನಿಸಿದ ಫರ್ವೇಜ್ ಫತೇಹ್ ಅಲಿ ಖಾನ್ ಅವರು ಖವ್ವಾಲಿ ಮಾದರಿಯ ಸಂಗೀತದಲ್ಲಿ ಖ್ಯಾತಿಗಳಿಸಿದವರು. "ಖವ್ವಾಲಿ ಶೆಹನ್ ಷಾ" ಎಂದೇ ಖ್ಯಾತರಾಗಿದ್ದ ಅವರು,  ಸೂಫಿ, ಘಜಲ್, ಫ್ಯೂಷನ್ ಮಾದರಿ ಸಂಗೀತ ಗಾಯನಗಳನ್ನೂ ಕೂಡ ಹಾಡಿದ್ದಾರೆ. ಮೂಲತಃ ಪಾಕಿಸ್ತಾನದ ಫೈಸಲಾಬಾದ್ ಮೂಲದವರಾದ ಫತೇಹ್ ಅಲಿ ಖಾನ್, ತಮ್ಮ 16ನೇ ವಯಸ್ಸಿನಲ್ಲಿ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನ ನೀಡಿದ್ದರು. ಇವರ ಕಲೆಯನ್ನು ಗುರ್ತಿಸಿದ ಓರಿಯಂಟಲ್ ಸ್ಟಾರ್ ಏಜೆನ್ಸಿ 1980ರಲ್ಲಿ ಬರ್ಮಿಂಗ್ ಹ್ಯಾಮ್ ಮತ್ತು ಲಂಡನ್ ನಲ್ಲಿ ಪ್ರದರ್ಶನ  ಏರ್ಪಡಿಸಿತು. ಆ ಬಳಿಕ ಖಾನ್ ಯೂರೋಪ್, ಭಾರತ, ಜಪಾನ್, ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಪ್ರದರ್ಶನ ನೀಡುವ ಮೂಲಕ ವಿಶ್ವಖ್ಯಾತಿ ಗಳಿಸಿದರು.

ಇದಾದ ಬಳಿಕ ವಿಶ್ವಾದ್ಯಂತ ಸುಮಾರು 40ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಗಾಯನ ಪ್ರದರ್ಶನ ನೀಡಿದ ಖ್ಯಾತಿ ಖಾನ್ ಅವರದ್ದು. ಹಲವು ವಿಶಿಷ್ಟ ಪ್ರಶಸ್ತಿಗಳನ್ನು ಪಡೆದಿರುವ ಅಲಿ ಖಾನ್ ಅವರು,  1987ರಲ್ಲಿ ಪಾಕಿಸ್ತಾನ ಅಧ್ಯಕ್ಷೀಯ ಪ್ರಶಸ್ತಿ ಪ್ರೈಡ್ ಆಫ್ ಪರ್ಫಾಮೆನ್ಸ್, 1995ರಲ್ಲಿ ಯುನೆಸ್ಕೋ ಸಂಗೀತ ಪ್ರಶಸ್ತಿ, 1966ರಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಅಮೆರಿಕ್ಸ್ ಪ್ರಶಸ್ತಿ, ಯುಕೆ ಏಷ್ಯನ್ ಪ್ರಶಸ್ತಿ ಸೇರಿದಂತೆ  ಹಲವು ಅಂತಾರಾಷ್ಟ್ರೀಯ ಖ್ಯಾತಿ ಪ್ರಶಸ್ತಿಗಳಿಗೆ ಭಆಜನರಾಗಿದ್ದಾರೆ.

1995ರ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಫತೇಹ್ ಅಲಿಖಾನ್ ಅವರನ್ನು ಲಂಡನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರನ್ನು ಕಿಡ್ನಿ ಟ್ರಾನ್ಸ್  ಪ್ಲಾಂಟೇಷನ್ ಗಾಗಿ ಲಾಸ್ ಎಂಜಲೀಸ್ ಕರೆದೊಯ್ಯುವಾಗ ಲಂಡನ್ ನಲ್ಲಿ ಆಗಸ್ಟ್ 11 1997ರಂದು ನಿಧನರಾದರು. ಅವರ ಹುಟ್ಟೂರಾದ ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.