ಬಿಹಾರದಲ್ಲಿ ಗೋಮಾಂಸ ಪ್ರಮುಖ ವಿಚಾರವೇ ಅಲ್ಲ
ಬಿಹಾರ ಚುನಾವಣೆಯಲ್ಲಿ ಬೀಫ್ ಪ್ರಮುಖ ರಾಜಕೀಯ ವಿಚಾರವೇ ಅಲ್ಲ. ಆದರೆ, ಬಿಜೆಪಿಯ ಅಜೆಂಡಾ, ವ್ಯೂಹತಂತ್ರ...

Published On :
ಪಟನಾ: ಬಿಹಾರ ಚುನಾವಣೆಯಲ್ಲಿ ಬೀಫ್ ಪ್ರಮುಖ ರಾಜಕೀಯ ವಿಚಾರವೇ ಅಲ್ಲ. ಆದರೆ, ಬಿಜೆಪಿಯ ಅಜೆಂಡಾ, ವ್ಯೂಹತಂತ್ರ ಬಹಿರಂಗ ಮಾಡಲು ಅನಿವಾರ್ಯವಾಗಿ ಆ ಬಗ್ಗೆ ಮಾತಾಡಬೇಕಾಯಿತು ಎಂದು ಸಿಎಂ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಉದ್ದೇಶಪೂರ್ವಕವಾಗಿ ಅಭಿವೃದ್ಧಿಯ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದೂ ಆರೋಪಿಸಿದ್ದಾರೆ. ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜತೆಗೆ, ಚುನಾವಣೆಯಲ್ಲಿ ಮಹಾ ಮೈತ್ರಿಕೂಟಕ್ಕೆ ಗೆಲವು ನಿಶ್ಚಿತ ಎಂದೂ ಭವಿಷ್ಯ ನುಡಿದಿದ್ದಾರೆ. ಇದಕ್ಕೂ ಮೊದಲು ನವಾಡ ರ್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದಲ್ಲಿ ಪ್ರಚಾರ ನಡೆಸುವ ನೀತಿ ನೋಡಿದರೆ ರಾಜ್ಯ ಬಿಜೆಪಿಯಲ್ಲಿ ಸೂಕ್ತ ನಾಯಕರೇ ಇದ್ದಂತೆ ಕಾಣುತ್ತಿಲ್ಲ. ಮುಂದಿನ ದಿನ ಗಳಲ್ಲಿ ಅವರು ಪಂಚಾಯತ್ ಚುನಾ ವಣೆಯನ್ನೂ ಪ್ರಧಾನಿ ನೇತೃತ್ವದಲ್ಲೇ ಎದುರಿಸಿದರೂ ಅಚ್ಚರಿ ಇಲ್ಲ ಎಂದು ನಿತೀಶ್ ವ್ಯಂಗ್ಯವಾಡಿದ್ದಾರೆ.
ಬ್ರಹ್ಮರಾಕ್ಷಸ: ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ಕೊನೇ ದಿನ ವಾದ ಶನಿವಾರ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೋದಿ ವಿರುದ್ಧ ಮತ್ತೆ ತಿರುಗಿ ಬಿದ್ದಿದ್ದಾರೆ.
ತಮ್ಮನ್ನು `ಶೈತಾನ' ಎಂದು ಕರೆದಿರುವ ಮೋದಿ ಅವರನ್ನು `ಬ್ರಹ್ಮರಾಕ್ಷಸ'ನಿಗೆ ಹೋಲಿಸಿರುವ ಅವರು, ಬಿಜೆಪಿ ಅಧ್ಯಕ್ಷರ ವಿರುದ್ಧವೂ ಹರಿಹಾಯ್ದಿದ್ದಾರೆ. ಅಮಿತ್ ಶಾ ಅವರೊಬ್ಬ `ನರಭಕ್ಷಕ' ಎಂದು ಜರೆದಿದ್ದಾರೆ. ಮೋದಿಯಂಥ ಬ್ರಹ್ಮಪಿಶಾಚಿಯನ್ನು ಮಾಟಮಂತ್ರದಿಂದಲೇ ಓಡಿಸಲು ಸಾಧ್ಯ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


