ಅಮರಾವತಿಯಲ್ಲಿ ನಿರ್ಮಾಣವಾಗುತ್ತಿದೆ ಚಂದ್ರಬಾಬು ನಾಯ್ಡು ದೇವಸ್ಥಾನ!
ಪ್ರೀತಿ ಹೆಚ್ಚಾದರೆ ಬಹುಶಃ ಈ ರೀತಿಯೂ ಆಗಬಹುದು ಎಂಬುದಕ್ಕೆ ಇನ್ನು ಮುಂದೆ ಆಂಧ್ರಪ್ರದೇಶದ ಅಮರಾವತಿ ಉದಾಹರಣೆಯಾಗಬಹುದು. ಆಂಧ್ರಪ್ರದೇಶದ ಅಮರಾವತಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದೇವಾಲಯವೊಂದನ್ನು ಕಟ್ಟಿ ಅಲ್ಲಿ...

ಹೈದರಾಬಾದ್: ಪ್ರೀತಿ ಹೆಚ್ಚಾದರೆ ಬಹುಶಃ ಈ ರೀತಿಯೂ ಆಗಬಹುದು ಎಂಬುದಕ್ಕೆ ಇನ್ನು ಮುಂದೆ ಆಂಧ್ರಪ್ರದೇಶದ ಅಮರಾವತಿ ಉದಾಹರಣೆಯಾಗಬಹುದು. ಆಂಧ್ರಪ್ರದೇಶದ ಅಮರಾವತಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದೇವಾಲಯವೊಂದನ್ನು ಕಟ್ಟಿ ಅಲ್ಲಿ ಅವರ ಮೂರ್ತಿಯನ್ನು ಸ್ಥಾಪನೆ ಮಾಡುವ ಕುರಿತಂತೆ ಮಾತುಗಳು ಕೇಳಿಬರುತ್ತಿವೆ.
ಚಂದ್ರಬಾಬು ನಾಯ್ಡುವಿಗೆ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಇದೀಗ ಅಮರಾತಿಯ ಹರಿಶ್ಚಂದ್ರಪುರಂ ಎಂಬ ಗ್ರಾಮದಲ್ಲಿ ಸರ್ಕಾರೀ ಜಾಗವೊಂದನ್ನು ಗುರ್ತಿಸಲಾಗಿದ್ದು, ಇಲ್ಲಿ ನಾಯ್ಡು ಅವರ ಮೂರ್ತಿ ಕೆತ್ತಲು ಪ್ರಸಿದ್ಧ ಶಿಲ್ಪಿಯೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ತೆಲುಗು ದೇಶಂ ಪಾರ್ಟಿ ಉಪಾಧ್ಯಕ್ಷ ಸತೀಶ್ ಬಾಬೂ ಅವರು, ಅಮರಾತಿಯ ಹರಿಶ್ಚಂದ್ರಪುರಂ ಎಂಬ ಗ್ರಾಮದ ಸರ್ಕಾರದ ಜಾಗದಲ್ಲಿ ಚಂದ್ರಬಾಬು ನಾಯ್ಡು ಅವರ ದೇವಸ್ಥಾನ ಸ್ಥಾಪನೆಗೆ ಇದೀ ಚರ್ಚೆಗಳು ನಡೆಸಲಾಗುತ್ತಿದೆ. ದೇವಸ್ಥಾನವನ್ನು ಇನ್ನು ಆರು ತಿಂಗಳೊಳಗಾಗಿ ಕಟ್ಟಲಾಗುತ್ತದೆ. ದೇವಸ್ಥಾನ ಕಟ್ಟಿದ ಮೇಲೆ ಇತರೆ ದೇವಾಲಯಗಳಂತೆಯೇ ಇಲ್ಲಿಯೂ ಪ್ರತಿನಿತ್ಯ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ನಡೆಸಲಾಗುತ್ತಿರುವ ಮಾತುಕತೆಯಲ್ಲಿ ದೇವಸ್ಥಾನದ ಪೂಜಾರಿ ನೇಮಕ ಬಗ್ಗೆಯೂ ಚರ್ಚೆಯಾಗುತ್ತಿದ್ದು, ಅಷ್ಟಸ್ತೋತ್ರ, ಸಹಸ್ರನಾಮ, ಅಭಿಷೇಕದ ಬಗ್ಗೆ ಇನ್ನೂ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಚಂದ್ರಬಾಬು ಅವರ ದೇವಾಲಯ ಕಟ್ಟುವ ಅವಶ್ಯಕವೇನಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಚಂದ್ರಬಾಬು ನಾಯ್ಡು ಅವರು, ಹೊಸ ರಾಜಧಾನಿಯೊಂದನ್ನು ಸೃಷ್ಟಿಸಿ ಮತ್ತು ಅದರ ಮುಖ್ಯಮಂತ್ರಿಯಾಗುವ ತಮ್ಮ ಸಾಮರ್ಥ್ಯದ ಮೂಲಕ ಅವರು ಸಾಕಷ್ಟು ಮಂದಿಗೆ ನೆರವಾಗಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಇದೊಂದು ಪ್ರಮುಖ ದಾರಿ ಎನಿಸಿತು. ಹೀಗಾಗಿ ದೇವಾಲಯ ಕಟ್ಟಲು ಯೋಜನೆ ರೂಪಿಸಲಾಯಿತು ಎಂದು ಸಮರ್ಥನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


