ಡ್ರಗ್ ನೀಡಿ ಅತ್ಯಾಚಾರ, ಸಾವು ಬದುಕಿನ ನಡುವೆ ಯುವತಿ ಹೋರಾಟ
ಸುಮಾರು 20 ವರ್ಷದ ಯುವತಿಗೆ ಡ್ರಗ್ ನೀಡಿ ಅತ್ಯಾಚಾರವೆಸಗಿರುವನ ಘಟನೆ ನೆರೆಯ ಗೋವಾದಲ್ಲಿ ನಡೆದಿದ್ದು, ತೀವ್ರ ಅಸ್ವಸ್ಥಳಾಗಿರುವ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಪಣಜಿ: ಸುಮಾರು 20 ವರ್ಷದ ಯುವತಿಗೆ ಡ್ರಗ್ ನೀಡಿ ಅತ್ಯಾಚಾರವೆಸಗಿರುವನ ಘಟನೆ ನೆರೆಯ ಗೋವಾದಲ್ಲಿ ನಡೆದಿದ್ದು, ತೀವ್ರ ಅಸ್ವಸ್ಥಳಾಗಿರುವ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಗೋವಾದ ಅಂಜುನ ಪ್ರದೇಶದಲ್ಲಿ ಕಳೆದ ಶನಿವಾರ ತಡರಾತ್ರಿಯಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರದಿಂದಾಗಿ ತೀವ್ರ ಅಸ್ವಸ್ಥಳಾಗಿರುವ ಯುವತಿಯನ್ನು ಗೋವಾ ಸರ್ಕಾರದ ಜಿಎಂಸಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಯುವತಿಗೆ ನೀಡಿರುವ ಡ್ರಗ್ಸ್ ಹೆಚ್ಚಿನ ಪ್ರಮಾಣದ್ದಾಗಿದ್ದು, ಆಕೆಯ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಗೋವಾ ಪೊಲೀಸರು ಶಂಕಿತ ಆರೋಪಿ 30 ವರ್ಷದ ಶಮೀಮ್ ಮೊಹಮದ್ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಶಮೀಮ್ ಮೊಹಮದ್ ಮಪುಸಾ ಜಿಲ್ಲೆಯ ಕ್ಯಾರ್ರಸ್ವಾಡ್ಡೋ ಪ್ರದೇಶದವನೆಂದು ತಿಳಿದುಬಂದಿದ್ದು, ಈತನಿಗೆ ಡ್ರಗ್ಸ್ ಮಾಫಿಯಾದ ಮಧ್ಯವರ್ತಿ ತುಕಾರಾಂ ಸಾವ್ಲೋ ಅಲಿಯಾಸ್ ನಾನಾ ಎಂಬಾತನ ಸಂಪರ್ಕ ಇತ್ತು ಎಂದು ತಿಳಿದುಬಂದಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋವಾ ಪೊಲೀಸರು, "ಅತ್ಯಾಚಾರಕ್ಕೊಳಗಾದ ಯುವತಿ ಮಹಾರಾಷ್ಟ್ರದ ರಾಯಘಡ ಮೂಲದವಳಾಗಿದ್ದು, ಇತ್ತೀಚೆಗೆ ತನ್ನ ಸ್ನೇಹಿತರೊಂದಿಗೆ ಅಂಜುನದಲ್ಲಿರುವ ಗೆಸ್ಟ್ ಹೌಸ್ ನಲ್ಲಿ ತಂಗಿದ್ದಳು. ಗೆಸ್ಟ್ ಹೌಸ್ ನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಮೀಮ್ ಅಹಮದ್ ಆಕೆಗೆ ಡ್ರಗ್ಸ್ ನೀಡಿ ಮತ್ತು ಬರಿಸಿ ನಂತರ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಈ ವಿಚಾರ ತಿಳಿದ ಆಕೆಯ ಸ್ನೇಹಿತರು ಕೂಡಲೇ ಗೆಸ್ಟ್ ಹೌಸ್ ಗೆ ಧಾವಿಸಿ, ಅಸ್ವಸ್ಥ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಜಿಎಂಸಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರು ಯುವತಿಯ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅವರು ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಪ್ರಸ್ತುತ ಪ್ರಕರಣ ಸಂಬಂಧ ಡ್ರಗ್ಸ್ ಓವರ್ ಡೋಸ್ ಪ್ರಕರಣ ಮಾತ್ರ ದಾಖಲಿಸಲಾಗಿದ್ದು, ಯುವತಿಗೆ ಪ್ರಜ್ಞೆ ಬಂದ ಬಳಿಕ ಆಕೆಯ ಹೇಳಿಕೆ ಸ್ವೀಕರಿಸಿ ಅತ್ಯಾಚಾರವಾದ ಕುರಿತು ಸ್ಪಷ್ಟನೆ ಪಡೆದು ಬಳಿಕ ಇತರೆ ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕಾಂತ್ ಕವಳೇಕರ್ ಅವರು ಸ್ಪಷ್ಟಪಡಿಸಿದ್ದಾರೆ. ನಿನ್ನೆಯಷ್ಟೇ ಗೋವಾ ನ್ಯಾಯಾಲಯ ಶಂಕಿತ ಆರೋಪಿ ಶಮೀಮ್ ಅಹ್ಮದ್ ಗೆ 3 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


