ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ?
ಗೋಮಾಂಸ ಭಕ್ಷಿಸಿದ್ದಾರೆ ಎಂಬ ಶಂಕೆ ಮೇರೆಗೆ ದಾದ್ರಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ಗೋಮಾಂಸ ನಿಷೇಧದ ದನಿಯೂ ಏರತೊಡಗಿದೆ. ಕೇರಳದಲ್ಲಿ...

Published On :
ನವದೆಹಲಿ: ಗೋಮಾಂಸ ಭಕ್ಷಿಸಿದ್ದಾರೆ ಎಂಬ ಶಂಕೆ ಮೇರೆಗೆ ದಾದ್ರಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ಗೋಮಾಂಸ ನಿಷೇಧದ ದನಿಯೂ ಏರತೊಡಗಿದೆ. ಕೇರಳದಲ್ಲಿ ಗೋಮಾಂಸ ನಿಷೇಧಿಸಲು ಧೈರ್ಯವಿದೆಯೆ? ಹೀಗೆ ಕೇಳುವ ಮೂಲಕ ಕೇಂದ್ರ ಸರ್ಕಾರ ಕಾಂಗ್ರೆಸ್ ಆಡಳಿತವಿರುವ ಕೇರಳ ಸರ್ಕಾರಕ್ಕೆ ಪ್ರಶ್ನೆಯೆಸಿದಿದೆ.
ಕೇರಳದಲ್ಲಿ ಗೋಮಾಂಸ ನಿಷೇಧ ಮಾಡಿ ನೋಡೋಣ ಎಂದು ಕೇಂದ್ರ ಕೃಷಿ ಸಹಮಂತ್ರಿ ಸಂಜೀವ್ ಬಲ್ಯಾಣ್ ಕೇರಳ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಗೋಮಾಂಸ ನಿಷೇಧಕ್ಕೆ ಮುಂದಡಿಯಿಟ್ಟಿದ್ದು ಕಾಂಗ್ರೆಸ್ ಪಕ್ಷವೇ ಎಂದು ಪಕ್ಷದ ಜನರಲ್ ಸೆಕ್ರೆಟರಿ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಲ್ಯಾಣ್ ಈ ರೀತಿ ಉತ್ತರಿಸಿದ್ದಾರೆ.
ಅದೇ ವೇಳೆ ಗೋಮಾಂಸ ನಿಷೇಧವನ್ನು ಇನ್ನಷ್ಟು ಶಕ್ತಗೊಳಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಚಿವರು ಆದೇಶಿಸಿದ್ದಾರೆ. ಹೋರಿಯ ಮಾಂಸ ಎಂದು ಹಸುವಿನ ಮಾಂಸವನ್ನು ರಫ್ತುಗೊಳಿಸುತ್ತಿದ್ದಾರೆಯೇ? ಎಂದು ಪರಿಶೀಲಿಸಲು ಕೃಷಿ ಸಚಿವಾಲಯ ಭಕ್ಷ್ಯ ಉತ್ಪನ್ನಗಳ ರಫ್ತು ಇಲಾಖೆಯ ಸಭೆಯನ್ನೂ ಕರೆದಿದೆ.
ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಗೋಮಾಂಸ ನಿಷೇಧ ಮಾಡಲಾಗಿದೆ. ಆದರೆ ಆಹಾರ ಕ್ರಮದ ಮೇಲೆ ಕೇಂದ್ರ ಸರ್ಕಾರ ಹೇರಿಕೆ ಸಲ್ಲ ಎಂದು ಕೆಲವು ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿದ್ದು, ಗೋಮಾಂಸ ನಿಷೇಧದ ವಿರುದ್ಧ ದನಿಯೆತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


