ಮಹಾರಾಷ್ಟ್ರ: 10 ವರ್ಷಗಳಲ್ಲಿ 502 ನಕ್ಸಲರ ಶರಣಾಗತಿ
ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.

ನಾಗ್ಪುರ: ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.
ಶರಣಾಗಿರುವವರ ಪೈಕಿ 482 ಜನರು ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯವರಾಗಿದ್ದಾರೆ. 2005 ರ ಆಗಸ್ಟ್ 29 ರಂದು ಅಂದಿನ ಮಹಾರಾಷ್ಟ್ರ ಸರ್ಕಾರ ನಕ್ಸಲ್ ಶರಣಾಗತಿ ನೀರಿಯನ್ನು ಜಾರಿಗೊಳಿಸಿತ್ತು, ಅದನ್ನು ಈವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಮದನ್ ಅಣ್ಣಾ ಅಲಿಯಾಸ್ ಬಾಲನ್ ಬಾಳ್ಯಾ ಸರ್ಕಾರದ ಯೋಜನೆಯಡಿ ಶರಣಾದ ಮೊದಲ ಮಾವೊವಾದಿಯಾಗಿದ್ದಾರೆ. 2013 ರಲ್ಲಿ 49 ನಕ್ಸಲರು ಹಾಗೂ 2014 ರಲ್ಲಿ 40 ನಕ್ಸಲರು ಶರಣಾಗಿದ್ದು 2015 ರ ಸೆಪ್ಟೆಂಬರ್ ನಲ್ಲಿ 25 ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
16 ಕಮಾಂಡರ್ ಗಳು, 24 ಡೆಪ್ಯುಟಿ ಕಮಾಂಡರ್ ಗಳು ಹಾಗೂ 218 ಸದಸ್ಯರು 110 ರಾಮ ರಕ್ಷಕರು, 127 ಸಂಗಮ್ ಸದಸ್ಯರು ಶರಣಾಗಿದ್ದಾರೆ. ಶರಣಾಗಿರುವವರ ಪ್ರಕಾರ ನಕ್ಸಲರಿಗೆ ಕುಶಲ್ಯ ತರಬೇತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


