ದೇಶ

ಅಸ್ಸಾಂನ 9 ಶಾಸಕರ ಅಮಾನತು

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಅಸ್ಸಾಂ ಘಟಕ ಒಂಬತ್ತು ಮಂದಿ ಶಾಸಕರನ್ನು ಪಕ್ಷದಿಂದ...

ಅಸ್ಸಾಂನ 9 ಶಾಸಕರ ಅಮಾನತು
ಸಾಂದರ್ಭಿಕ ಚಿತ್ರ
Published On :
ಗುವಾಹಟಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಅಸ್ಸಾಂ ಘಟಕ ಒಂಬತ್ತು ಮಂದಿ ಶಾಸಕರನ್ನು ಪಕ್ಷದಿಂದ ಹೊರಹಾಕಿದೆ. 
ಈ ಕುರಿತು ವಾರದೊಳಗೆ ಆದೇಶ ಹೊರಡಿಸುವುದಾಗಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಂಜನ್ ದತ್ತಾ ಹೇಳಿದ್ದಾರೆ. ಪಕ್ಷದ ಶಿಸ್ತು ಸಮಿತಿ ಸಭೆಯಲ್ಲಿ ಶಾಸಕರನ್ನು ಹೊರಹಾಕುವ ನಿರ್ಧಾರ ಪ್ರಕಟಿಸಲಾಗಿದೆ. 
ಕೆಲವರನ್ನು ಈ ಒಂಬತ್ತು ಮಂದಿಯಲ್ಲಿ ಐದು ಮಂದಿಯನ್ನು ಆಗಸ್ಟ್ ತಿಂಗಳಿಂದಲೇ ಪಕ್ಷದಿಂದ ಹೊರದಬ್ಬಲಾಗಿತ್ತು.ಇನ್ನು ಉಳಿದ ನಾಲ್ವರಿಗೆ ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧಿಸಿ ಶೋಕಾಸ್ ಜಾರಿ ಮಾಡಲಾಗಿತ್ತು. 
ಒಟ್ಟು 126 ಸದಸ್ಯಬಲದ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ 77(ಹೊರಹಾಕಿದ 9 ಮಂದಿ ಸೇರಿ ) ಸದಸ್ಯರನ್ನು ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.