ದೇಶ

ರಾಜೀವ್ ಸರ್ಕಾರ ಪತನಕ್ಕೆ ಜೈಲ್ ಸಿಂಗ್ ಷಡ್ಯಂತ್ರ?

ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಸರ್ಕಾರವನ್ನು ಪತನಗೊಳಿಸಲು...

ರಾಜೀವ್ ಸರ್ಕಾರ ಪತನಕ್ಕೆ ಜೈಲ್ ಸಿಂಗ್ ಷಡ್ಯಂತ್ರ?
ರಾಜೀವ್ ಗಾಂಧಿ
Published On :
ನವದೆಹಲಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಸರ್ಕಾರವನ್ನು ಪತನಗೊಳಿಸಲು ಬಹುದೊಡ್ಡ ಷಡ್ಯಂತ್ರ ನಡೆದಿತ್ತು. 
ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಸೇರಿ ಹಲವು ಮಂದಿ ಈ ಸಂಚಿನ ಭಾಗವಾಗಿದ್ದರು ಎನ್ನುವ ಸ್ಫೋಟಕ ಮಾಹಿತಿಯೊಂದನ್ನು ವೆಸ್ಟರ್ನ್ ಕಮಾಂಡ್‍ನ ಮಾಜಿ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಪಿ.ಎನ್. ಹೂನ್ ಅವರ `ದಿ ಅನ್‍ಟೋಲ್ಡ್ ಟ್ರುಥ್' ಬಹಿರಂಗ ಪಡಿಸಿದೆ.
1987ರಲ್ಲಿ ರಾಜೀವ್ ಸರ್ಕಾರವನ್ನು ಸೇನಾ ದಂಗೆ ಮೂಲಕ ಪದಚ್ಯುತಗೊಳಿಸಲು ಈ ಸಂಚು ರೂಪಿಸಲಾಗಿತ್ತು. ಸೇನಾ ದಂಗೆಗಾಗಿ ವೆಸ್ಟರ್ನ್ ಕಮಾಂಡ್ ಗೆ ಸೇರಿದ ಒಂದು ಸೇರಿ ಒಟ್ಟು 3 ಪ್ಯಾರಾ ಕಮಾಂಡೋ ಬೆಟಾಲಿಯನ್‍ಗಳಿಗೆ ದೆಹಲಿಗೆ ತೆರಳುವಂತೆ ಸೂಚಿಸಲಾಗಿತ್ತು. 
ಮಾಜಿ ಸೇನಾ ಮುಖ್ಯಸ್ಥ ಕೃಷ್ಣಸ್ವಾಮಿ¸ ಸುಂದರ್ ಹಾಗೂ ಲೆಫ್ಟಿನೆಂಟ್ ಜನರಲ್ ಎಸ್ ಎಫ್ ರೋಡ್ರಿಗಸ್ ಈ ಕಾರ್ಯಾಚರಣೆಯ ಭಾಗವಾಗಿದ್ದರು. ಸಿಂಗ್ ಅವರಿಗೆ ಭ್ರಷ್ಟಾಚಾರ ಹಾಗೂ ಸಿಖ್‍ದಂಗೆ ಕುರಿತು ಕ್ರಮ ಕೈಗೊಳ್ಳದ ರಾಜೀವ್ ವಿರುದ್ಧ ಅಸಮಾಧಾನ ಇತ್ತು. ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ಹೂನ್ ತಕ್ಷಣ ರಾಜೀವ್ ಗಾಂಧಿ ಅವರಿಗೆ ಸುದ್ದಿ ನೀಡಿದ್ದರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.