ದೇಶ

ಆ್ಯಪಲ್ 6S ಐ ಫೋನ್ ಕಳ್ಳಸಾಗಣೆ ಮಾಡುತ್ತಿದ್ದವರ ಬಂಧನ; 182 ಐ ಫೋನ್ ಗಳು ವಶ

ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆಬರಲಿರುವ ಆ್ಯಪಲ್ 6S ಮತ್ತು 6S ಪ್ಲಸ್ ಐ ಫೋನ್ ಗಳನ್ನು ಕದ್ದು ಸಾಗಿಸುತ್ತಿದ್ದ 7 ಮಂದಿಯನ್ನು ...

ಆ್ಯಪಲ್ 6S ಐ ಫೋನ್ ಕಳ್ಳಸಾಗಣೆ ಮಾಡುತ್ತಿದ್ದವರ ಬಂಧನ; 182 ಐ ಫೋನ್ ಗಳು ವಶ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆಬರಲಿರುವ ಆ್ಯಪಲ್ 6S ಮತ್ತು 6S ಪ್ಲಸ್ ಐ ಫೋನ್ ಗಳನ್ನು ಕದ್ದು ಸಾಗಿಸುತ್ತಿದ್ದ 7 ಮಂದಿಯನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಪೊಲೀಸರು ಅವರಿಂದ 182 ಆ್ಯಪಲ್ ಐ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳಸಾಗಣೆ ಮಾಡುವ ಯುವಕರಿಗೆ ಹೆಚ್ಚಿನ ಹಣ ನೀಡಿ ಅವರಿಂದ ವಸ್ತುಗಳನ್ನು ಕದ್ದು ಸಾಗಮ ಮಾಡಿಸಲಾಗುತ್ತದೆ. ಮಾಹಿತಿ ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಫೋನ್ ಗಳನ್ನು ಸೀಜ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಹಾಂಗ್ ಕಾಂಗ್ ಮತ್ತು ಸಿಂಗಾ ಪೂರ್ ಗಳಿಂದ ತಮ್ಮ ಬ್ಯಾಗೇಜ್ ನಲ್ಲಿ  ಐ ಪೋನ್ ಗಳನ್ನು ಕದ್ದು ಸಾಗಿಸುತ್ತಿದ್ದ ಕೆಲ ಯುವಕರನ್ನು ಬಂಧಿಸಿದ್ದ ಪೊಲೀಸರು ಅವರಿಂದ 20 ಐ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.

ಅಕ್ಟೋಬರ್ 16 ರಂದು ಆ್ಯಪಲ್  6s ಮತ್ತು 6S ಪ್ಲಸ್ ಮಾಡೆಲ್ ಐ ಫೋನ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.