ಗಾಂಧಿ ಹತ್ಯೆಗೆ ಮೋದಿಯವರೇ ಪರೋಕ್ಷ ಕಾರಣ: ಲಾಲೂ ಪ್ರಸಾದ್ ಯಾದವ್
ನಮ್ಮ ದೇಶದ ಪಿತಾಮಹ ಎನಿಸಿಕೊಂಡಿರುವ ಮಹಾತ್ಮಾ ಗಾಂಧಿಯವರ ಹತ್ಯೆಗೆ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ...

ಪಾಟ್ನಾ: ನಮ್ಮ ದೇಶದ ಪಿತಾಮಹ ಎನಿಸಿಕೊಂಡಿರುವ ಮಹಾತ್ಮಾ ಗಾಂಧಿಯವರ ಹತ್ಯೆಗೆ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರಣ ಎಂದು ಹೇಳುವ ಮೂಲಕ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೊಸದೊಂದು ವಿವಾದದ ಕಿಡಿ ಹತ್ತಿಸಿದ್ದಾರೆ.
ಅವರು ನಿನ್ನೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು ಹೀಗಿದೆ:ಮಹಾತ್ಮಾ ಗಾಂಧೀಜಿಯವರ 146ನೇ ಜಯಂತಿ ಸಂದರ್ಭದಲ್ಲಿ ಅವರನ್ನು ನೆನೆಸಿಕೊಂಡಿರುವ ಲಾಲೂ, ನಾಥೂರಾಮ್ ಗೋಡ್ಸೆಯವರನ್ನು ಯಾರು ಅನುಸರಿಸಿಕೊಂಡು ಹೋಗುತ್ತಾರೆ? ಅದಕ್ಕೆ ಉತ್ತರ, ಆರ್ ಎಸ್ಎಸ್, ಆರ್ ಎಸ್ ಎಸ್ ನ್ನು ಯಾರು ಫಾಲೋ ಮಾಡುತ್ತಾರೆ? ಉತ್ತರ: ಬಿಜೆಪಿ,ನಂತರದ ಪ್ರಶ್ನೆ ಬಿಜೆಪಿಯನ್ನು ಯಾರು ನಡೆಸಿಕೊಂಡು ಹೋಗುತ್ತಾರೆ? ಅದಕ್ಕೆ ಉತ್ತರ ಮೋದಿ, ಹೀಗೆ ಸರಣಿ ಪ್ರಶ್ನೋತ್ತರವನ್ನು ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್ 12ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ಪರಸ್ಪರ ಆರೋಪಗಳಲ್ಲಿ ತೊಡಗಿವೆ. ಇದಕ್ಕೆ ಪ್ರಮುಖ ವೇದಿಕೆಯಾಗಿರುವುದು ಸಾಮಾಜಿಕ ಮಾಧ್ಯಮ. ಇತ್ತೀಚೆಗೆ ಎನ್ ಡಿಎ ಮೈತ್ರಿಕೂಟದ ನಾಯಕರು ಮತ್ತು ಮಹಾಘಟ್ ಬಂದನ್(ಸಂಯುಕ್ತ ಜನತಾದಳ-(ಆರ್ ಜೆಡಿ) ಮತ್ತು ಕಾಂಗ್ರೆಸ್ ) ಪರಸ್ಪರ ಆರೋಪಗಳಲ್ಲಿ ತೊಡಗಿವೆ.
ಲಾಲೂ ಪ್ರಸಾದ್ ಯಾದವ್ ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ನರಭಕ್ಷಿ ಎಂದು ಕರೆದು ವಿವಾದಕ್ಕೀಡಾಗಿದ್ದರು. ಅದಕ್ಕೆ ಮೊದಲು ಲಾಲೂ ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅಮಿತ್ ಷಾ ಅವರು ಜೈಲಿನಿಂದ ಬಂದಿದ್ದಾರೆ. ಅವರು ಸಾವಿರಾರು ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅವರೊಬ್ಬ ಕ್ರೂರ ವ್ಯಕ್ತಿ ಎಂದು ಕರೆದಿದ್ದರು.
ಮೊನ್ನೆ ಲಾಲೂ ಪ್ರಸಾದ್ ಯಾದವ್ ಅವರ ಟೀಕೆಗೆ ತಿರುಗೇಟು ನೀಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, ಲಾಲೂ ಅವರು ರೈಲ್ವೆ ಸಚಿವರಾಗಿದ್ದಾಗ ಗೋದ್ರಾ ರೈಲು ದುರಂತದ ಬಗ್ಗೆ ತಪ್ಪು ವರದಿಯನ್ನು ತಯಾರಿಸಿದ್ದರು. ಆರ್ ಜೆಡಿಯು ಸಮಾಜದ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


